ಒಲಂಪಿಕ್ಸ ಮಹಿಳಾ ಬಾಕ್ಸಿಂಗ್ ಭಾರತಕ್ಕೆ ಕಂಚಿನ ಪದಕ

  • 30 Dec 2023 , 5:51 PM
  • world
  • 243

ಒಲಂಪಿಕ್ಸಭಾರತೀಯ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಬುಧವಾರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಮುಡಿಗೇರಿಸಿಕೊಂಡಿದ್ದಾರೆ.

promotions

ಒಂದೆರಡು ಎಚ್ಚರಿಕೆಯ ಹೊರತಾಗಿಯೂ ರೆಫರಿಯ ಸೂಚನೆಗಳನ್ನು ಗಮನಿಸದ ಕಾರಣ ಅಸ್ಸಾಂನ್ ಬಾಕ್ಸರ್ ಎರಡನೇ ಸುತ್ತಿನಲ್ಲಿ ಒಂದು ಪಾಯಿಂಟ್ ಕಡಿತವನ್ನು ನಿಭಾಯಿಸಬೇಕಾಯಿತು.

promotions

ಲೊವ್ಲಿನಾ ಬೊರ್ಗೊಹೈನ್ ನಿಮ್ಮ ಕಠಿಣ ಪರಿಶ್ರಮ ಮತ್ತು ದೃಡ ನಿರ್ಧಾರದಿಂದ, ನೀವು ರಾಷ್ಟ್ರದ ಹೆಮ್ಮೆಯನ್ನು ಹೆಚ್ಚಿಸಿದ್ದಿರಿ, ಒಲಿಂಪಿಕ್ಸ್ ಕ್ರೀಡಾಕೂಟದ ಬಾಕ್ಸಿಂಗ್‌ನಲ್ಲಿ ನೀವು ಗೆದ್ದ ಕಂಚಿನ ಪದಕವು ಯುವಕರಿಗೆ, ವಿಶೇಷವಾಗಿ ಯುವತಿಯರಿಗೆ ಸವಾಲುಗಳೊಂದಿಗೆ ಹೋರಾಡಲು ಮತ್ತು ಅವರ ಕನಸುಗಳನ್ನು ನನಸಾಗಿಸಿಕೊಳ್ಳಲು ಪ್ರೇರೇಪಿಸುತ್ತದೆ ಎಂದು ರಾಷ್ಟ್ರಪತಿಗಳು ಅಭಿನಂದಿಸಿದ್ದಾರೆ.

ಲೊವ್ಲಿನಾ ಬೊರ್ಗೊಹೈನ್ ಬಾಕ್ಸಿಂಗ್ ರಿಂಗ್‌ನಲ್ಲಿ ಕಂಡ ಯಶಸ್ಸು ಹಲವಾರು ಭಾರತೀಯರಿಗೆ ಸ್ಫೂರ್ತಿ ನೀಡುತ್ತದೆ. ಆಕೆಯ ದೃಡ್ ನಿರ್ಧಾರವು ಶ್ಲಾಘನೀಯವಾಗಿದೆ. ಕಂಚು ಗೆದ್ದ ಲೊವ್ಲಿನಾ ಬೊರ್ಗೊಹೈನರವರಿಗೆ ಅಭಿನಂದನೆಗಳು. ಆಕೆಯ ಮುಂದಿನ ಪ್ರಯತ್ನಗಳಿಗೆ ಶುಭ ಹಾರೈಕೆಗಳು ಎಂದು ಪ್ರಧಾನಿ ಶುಭ ಹಾರೈಸಿದ್ದಾರೆ.

Read More Articles