ಬೇಗ್‍ಗೆ ಇಡಿ, ಜಮೀರ ಕೋಟೆಗೆ ಐಟಿ ಶಾಕ್
- 30 Dec 2023 , 5:51 PM
- Bengaluru
- 140
ಬೆಂಗಳೂರು :ಕಾಂಗ್ರೆಸ್ ಶಾಸಕ ಜಮೀರ ಅಹ್ಮದಗೆ ಐಟಿ ಇಲಾಖೆ ಶಾಕ್ ನೀಡಿದರೇ, ಇತ್ತ ಮಾಜಿ ಸಚಿವ ರೋಷನ್ ಬೇಗ್‍ಗೆ ಇಡಿ ದಾಳಿ ನಡೆಸಿ ಶಾಕ್ ನೀಡಿದೆ. ಶಿವಾಜಿ ನಗರದ ರೋಷನ್ ಬೇಗ್ ಮನೆ ಹಾಗೂ ಕಚೇರಿಯಲ್ಲಿ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಐಎಂಎ ಹಗರಣದಲ್ಲಿ ರೋಷನ್ ಬೇಗ್ ಹೆಸರು ತಳಕು ಹಾಕಿದ ಹಿನ್ನೆಲೆಯಲ್ಲಿ ಹೈಕೋರ್ಟ್ ಅವರ ಆಸ್ತಿ ತಪಾಸಣೆ ನಡೆಸಿ ಜಪ್ತಿ ಮಾಡಬೇಕೆಂದು ಈ ಹಿಂದೆಯೇ ಸೂಚನೆ ನೀಡಿತ್ತು.

ಸಿಆರ್‍ಪಿಎಫ್ ಭದ್ರತೆಯಲ್ಲಿ ಇಡಿ ಅಧಿಕಾರಿಗಳು ಆರು ಕಡೆಗಳಲ್ಲಿ ರೋಷನ್ ಬೇಗ್ ಆಸ್ತಿ, ಅಕ್ರಮವಾಗಿ ಸಂಪಾದನೆ ಮಾಡಿರುವ ಆಸ್ತಿಯ ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್ ಶಾಸಕ ಜಮೀರ ಅಹ್ಮದ ಮನೆಯ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ಎರಡು ಕಾರುಗಳಲ್ಲಿ ಬಂದು ಜಮೀರ ಮನೆಯ ಮೇಲೆ ದಾಳಿ ನಡೆಸಿ ಶಾಕ ಕೊಟ್ಟಿದ್ದಾರೆ.










