ಕಳೆದ ಬಾರಿ ಪ್ರವಾಹದಲ್ಲಿ 1800 ಕೋಟಿರೂ . ಹಾನಿಯಾಗಿತ್ತು: ಸಚಿವ ಈಶ್ವರಪ್ಪ

ಬೆಳಗಾವಿ:ಕಳೆದ ಬಾರಿ ಪ್ರವಾಹದಿಂದ 1800 ಕೋಟಿ ರುಪಾಯಿ ಹಾನಿಯಾಗಿತ್ತು. ರಸ್ತೆ ಸುಧಾರಣೆಗೆ ಯಾವ ವರದಿ ಬರುತ್ತದೆ ಎಂದು ನೋಡಿಕೊಂಡು ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಎಷ್ಟು ಹಣ ಬಿಡುಗಡೆ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿಗಳೊಂದಿಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

promotions

ಮಂಗಳವಾರ ನಗರದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ ಹಾಗೆ ಎಲ್ಲ ನೂತನ ಸಚಿವರು ಜಿಲ್ಲಾ ಪ್ರವಾಸ ಮಾಡಿ ಬಂದಿದ್ದಾರೆ. ಸರ್ವೆ ವರದಿ ಸಲ್ಲಿಸಿದ ಬಳಿಕ ಮುಖ್ಯಮಂತ್ರಿ ತಿರ್ಮಾನ ಮಾಡುತ್ತಾರೆ ಎಂದ ಅವರು, ಬಿಜೆಪಿ ಜನಸಂಘ ಇರುವ ವೇಳೆ ನಮ್ಮ ರಾಷ್ಟಿçÃಯ ಅಧ್ಯಕ್ಷರಾಗಿದ್ದ ಪಂಡಿತ ದಿನದಯಾಳ ಉಪಾಧ್ಯಾಯರ ಕೊಲೆಯಾಗಿತ್ತು. ಆ ಸಂದರ್ಭದಲ್ಲಿ ನಮಗೆ ಶಕ್ತಿ ಇರಲಿಲ್ಲ. ಆಗ ಇಡೀ ರಾಷ್ಟ್ರ ನಾಯಕರು ಶಾಂತಿಯಿಂದ್ ಇರುವಂತೆ ಹೇಳಿದ್ದರು.

promotions

ಕೊಲೆಯಾಯ್ತು, ಸುಲಿಗೆ ಆಯಿತು. ಆಗ ನಮ್ಮ ನಾಯಕರು ಹೇಳಿದರು. ನೀವಾಗೆ ನೀವು ಯಾರನ್ನು ಹೊಡೆಯ ಬೇಡಿ. ನಿಮ್ಮನ್ನು ಹೊಡೆದರೆ ಬಿಡಬೇಡಿ ಎಂದು ಹೇಳಿದ್ದರು. ಇದನ್ನಾ ನಾನು ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದೆ ಎಂದರು.

Read More Articles