ಹೆಚ್ಚಿದ ತಾಲಿಬಾನಿಗಾಳ ಪುಂಡಾಟ ಅರ್ಧದಷ್ಟು ಅಫ್ಘಾನಿಸ್ತಾನ ತಾಲಿ ಬಾನಿಗಳ ತೆಕ್ಕೆಗೆ
- 14 Jan 2024 , 10:36 PM
- world
- 109
ಅಫ್ಘಾನಿಸ್ತಾನ ತಾಲಿಬಾನ್ ಶುಕ್ರವಾರ ಅಫ್ಘಾನಿಸ್ತಾನದ ಪ್ರಾಂತೀಯ ರಾಜಧಾನಿಗಳ ಮೇಲೆ ತನ್ನ ಮುತ್ತಿಗೆಯನ್ನು ಮುಂದುವರೆಸಿ ದೇಶದ ಅತಿದೊಡ್ಡ ನಗರಗಳಾದ ಕಂದಹಾರ್ ಮತ್ತು ಹೆರಾತನನ್ನು ಹತೋಟಿಗೆ ತೆಗೆದುಕೊಂಡಿದೆ.

ಯುಎಸ್ ಮತ್ತು ನ್ಯಾಟೋ ಸೇರಿದಂತೆ ವಿದೇಶಿ ಸೇನಾಪಡೆಗಳು ಆಗಸ್ಟ್ 31 ರೊಳಗೆ ಅಫ್ಘಾನಿಸ್ತಾನದಿಂದ ಹಿಂತೆಗೆದುಕೊಳ್ಳಲಿರುವ ಕಾರಣ ತಾಲಿಬಾನ್ ಮತ್ತು ಅಫ್ಘಾನ್ ಪಡೆಗಳ ನಡುವಿನ ಘರ್ಷಣೆಗಳು ತೀವ್ರಗೊಂಡಿವೆ.

ಗುಪ್ತಚರ ಮೌಲ್ಯಮಾಪನದ ನಿರೀಕ್ಷೆಯಂತೆ ಅಫ್ಘಾನಿಸ್ತಾನದಲ್ಲಿರುವ ಕೆಲವು ರಾಯಭಾರ ಸಿಬ್ಬಂದಿಯನ್ನು ಸ್ಥಳಾಂತರಿಸಲು ಸೈನ್ಯವನ್ನು ಕಳುಹಿಸಲಾಗುತ್ತಿದೆ ಎಂದು ಪೆಂಟಗನ್ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ ಮತ್ತು ಸಮೀಕ್ಷೆ ಪ್ರಕಾರ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ 90 ದಿನಗಳಲ್ಲಿ ತಾಲಿಬಾನ್ ವಶಕ್ಕೆ ಹೋಗಬಹುದು ಎಂದು ಅಂದಾಜಿಸಲಾಗಿದೆ.
ಇದರೊಂದಿಗೆ ಭಾರತ ಸರಕಾರವು ಕೂಡಾ ಅಫ್ಘಾನಿಸ್ತಾನದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳು ಪ್ರತಿಪಾದಿಸಿದ ಎಲ್ಲಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕೋರಿದೆ.
ಭಾರತೀಯ ರಾಯಭಾರ ಕಚೇರಿಯು ಎಲ್ಲಾ ಭಾರತೀಯ ಪ್ರಜೆಗಳು ಕಾಲಕಾಲಕ್ಕೆ ಒದಗಿಸುವ ಭದ್ರತಾ ಸಲಹೆಗಳ ಹಂತಗಳನ್ನು ಸಂಪೂರ್ಣವಾಗಿ ಅನುಸರಿಸುಲು ಕೇಳಿಕೊಂಡಿದೆ. ಭಾರತೀಯ ಮಾಧ್ಯಮದ ಸದಸ್ಯರು ಅಫ್ಘಾನಿಸ್ತಾನದಲ್ಲಿ ತಮ್ಮ ವಾಸ್ತವ್ಯ ಮತ್ತು ಚಲನೆಗಳಿಗಾಗಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಅಫ್ಘಾನಿಸ್ತಾನಕ್ಕೆ ಬರುವ ಮುನ್ನ ಸಂದರ್ಶನಗಳು ಮತ್ತು ಯೋಜಿತ ಕವರೇಜ್ ಸೇರಿದಂತೆ ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ತಿಳಿಸಿದೆ.
ಅಫಘಾನಿಸ್ತಾನದಲ್ಲಿರುವ ಎಲ್ಲಾ ಭಾರತೀಯ ಪ್ರಜೆಗಳಿಗೆ ಮತ್ತೊಮ್ಮೆ ತಮ್ಮನ್ನು ಭಾರತದ ರಾಯಭಾರ ಕಚೇರಿಯ ವೆಬ್‌ಸೈಟ್‌ನಲ್ಲಿ ನೋಂದಾಯಿಸಿಕೊಳ್ಳಲು ಈ ಕೆಳಗಿನ ಲಿಂಕ್ ಬಳಸಲು ಸೂಚಿಸಲಾಗಿದೆ:
https://eoi.gov.in/kabul/ paw.kabul@mea.gov.in










