ಮೈಸೂರು: ಕಿಲ್ಲರ್ ಕೋರೊನಾ ಸಾಂಸ್ಕೃತಿಕ ನಗರಿ ಮೈಸೂರಿನ ಅರಮನೆಗೂ ಕಾಲಿಟ್ಟಿದೆ. ಅರಮನೆಯ ಹಿಂಬದಿ ಕಟ್ಟಲಾಗಿರುವ ಒಂಟೆ ನೋಡಿಕೊಳ್ಳುತ್ತಿದ್ದ ವ್ಯಕ್ತಿಯ ಮಗನಿಗೆ ಕೊರೋನಾ ವೈರಸ್ ಪಾಸಿಟಿವ್ ಇರುವದು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಮೈಸೂರು ಅರಮನೆಯ ವೀಕ್ಷಣೆಗೆ ಶನಿವಾರ ಭಾನುವಾರ ಎಂದಿನಂತೆ ಪ್ರವಾಸಿಗರಿಗೆ ಅರಮನೆ ಪ್ರವೇಶ ನಿರ್ಬಂಧಿಸಲಾಗಿದೆ. ಹಾಗೂ ಮೂರು ದಿನ ಅರಮನೆ ಬಂದ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.