ಅಭಿಷೇಕ್ ಬಚ್ಚನಗು ಕೊರೋನಾ ಪಾಸಿಟಿವ್

ಬಾಲಿವುಡ್ ಕಿಂಗ್ ಅಮಿತಾಬ್ ಬಚ್ಚನ್ ಕೊರೋನಾ ಸೋಂಕು ತಗುಲಿರುವದು ದೃಡವಾಗಿದೆ ಅವರನ್ನು ಮುಂಬಯಿನ ನಾನಾವಟಿ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಅವರಿಗೆ ಕೊರೊನ ಸೋಂಕು ತಗುಲಿದ್ದು. ಸ್ವತಃ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿ ಮಾಹಿತಿಯನ್ನು ಕೊಟ್ಟಿದ್ದರು ಅವರಿಗೆ ಸೋಂಕು ದೃಢಪಟ್ಟ ಬೆನ್ನಲ್ಲೇ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರಿಗೂ ಸೋಂಕು ದೃಢಪಟ್ಟಿದೆ. ಆದರೆ ಅವರ ಪತ್ನಿ ಐಶ್ವರ್ಯಾ ರೈ ಬಚ್ಚನ್ ಅವರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ನನಗೆ ಹಾಗೂ ತಂದೆಗೆ ಕೊರೋನ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ ಎಂದು ರಾತ್ರಿ 11:57ಕ್ಕೆ ಸ್ವತಃ ಟ್ವೀಟ್ ಮೂಲಕ ಅಭಿಷೇಕ್ ಬಚ್ಚನ್ ಬಹಿರಂಗಪಡಿಸಿದ್ದಾರೆ. ಇಬ್ಬರಿಗೂ ಅಲ್ಪಪ್ರಮಾಣದ ಲಕ್ಷಣ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿರುವುದಾಗಿ ಹೇಳಿದ್ದಾರೆ.

promotions

Read More Articles