ಮಹಾನಗರ ಪಾಲಿಕೆ ಚುನಾವಣೆ ಮತದಾನದ ಅವಧಿ ಒಂದು ಗಂಟೆ ವಿಸ್ತರಣೆ
- 15 Jan 2024 , 12:32 AM
- Belagavi
- 119
ಬೆಳಗಾವಿ: ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆ ೨೦೨೧ ರ ೫೮ ವಾರ್ಡಗಳಿಗೆ ಚುನಾವಣೆ ವೇಳಾ ಪಟ್ಟಿ ಪ್ರಕಟಿಸಲಾಗಿದ್ದು, ಸೆಪ್ಟೆಂಬರ್ ೦೩ ರಂದು ಮತದಾನ ನಡೆಯಲಿದೆ. ಅದರಂತೆ, ಮತದಾನದ ಸಮಯವನ್ನು ಮುಂಜಾನೆ ೭:೦೦ ಗಂಟೆಯಿಂದ್ ಸಾಯಂಕಾಲ ೫:೦೦ ಗಂಟೆಯವರೆಗೆ ನಿಗದಿಪಡಿಸಲಾಗಿತ್ತು.

ಆದರೆ, ಸೆಪ್ಟೆಂಬರ್ ೦೩ ರಂದು ಜರುಗಲಿರುವ ಮಹಾನಗರ ಪಾಲಿಕೆ ಬೆಳಗಾವಿ ಸಾರ್ವತ್ರಿಕ ಚುನಾವಣೆ ಕುರಿತು ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ರಾಯಬಾಗ ಪಟ್ಟಣ ಪಂಚಾಯತಿ ವಾರ್ಡ ನಂ. ೯ ಹಾಗೂ ಪುರಸಭೆ ಸವದತ್ತಿ ಯಲ್ಲಮ್ಮ ವಾರ್ಡ ನಂ. ೨೩ ರ ಮತದಾನದ ಸಮಯವನ್ನು ಮುಂಜಾನೆ ೭:೦೦ ಸಾಯಂಕಾಲ ೬:೦೦ ಗಂಟೆಯವರೆಗೆ ರಾಜ್ಯ ಚುನಾವಣಾ ಆಯೋಗವು ವಿಸ್ತರಿಸಿದೆ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











