ಆಪ್ ದಿಂದ ಬೆಳಗಾವಿಯಲ್ಲಿ ಸ್ಪೋರ್ಟ್ಸ್ ಯುನಿವರ್ಸಿಟಿ ಪ್ರಾರಂಭ: ರೋಮಿ

ಬೆಳಗಾವಿ: ದೆಹಲಿ ಸರಕಾರದ ಮಾದರಿಯಲ್ಲಿ ಬೆಳಗಾವಿ ‌ನಗರದ ಯುವ ಕ್ರೀಡಾಪಟುಗಳಿಗಾಗಿ ಆಮ್ ಆದ್ಮಿಯಿಂದ ಸ್ಪೋರ್ಟ್ಸ್ ಯುನಿವರ್ಸಿಟಿ ಪ್ರಾರಂಭಿಸಲಾಗುತ್ತಿದೆ ಎಂದು ರೋಮಿ ಭಾಟಿಯಾ ಹೇಳಿದರು. ಅವರು ಬುಧವಾರ ಕನ್ನಡ ಸಾಹಿತ್ಯ ಭವನದಲ್ಲಿ ಕರೆಯಲಾದ‌ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

promotions

ಬೆಳಗಾವಿ ನಗರದಲ್ಲಿ ಆಮ್ ಆದ್ಮಿ ಪಾರ್ಟಿಯಿಂದ ಕ್ರೀಡಾ ಚಟುವಟಿಕೆಗಾಗಿ ಸುಸಜ್ಜಿತವಾದ ಮಹೇಂದ್ರ ಮಲ್ಲಸಜ್ಜ ದೇಸಾಯಿ ಅವರು ಬಂಬಾರಿ ವಿಲೇಜ್ ನಲ್ಲಿ ಮೂರ ಎಕರೆ ಜಮೀನನ್ನು ಉಚಿತವಾಗಿ ನೀಡಿದ್ದಾರೆ ಎಂದರು. ದೆಹಲಿಯಲ್ಲಿ ಕ್ರೀಡಾ ಚಟುವಟಿಕೆಗಾಗಿ ಮುಖ್ಯಮಂತ್ರಿ ಅರವಿಂದ ಕ್ರೇಜಿವಾಲ್ ನೇತೃತ್ವದಲ್ಲಿ ಪ್ರಾರಂಭಿಸಲಾಗಿದೆ.

promotions

ಇದೇ ಮಾದರಿಯಲ್ಲಿ ಬೆಳಗಾವಿಯ ಮಕ್ಕಳಿಗಾಗಿ ಸುಸಜ್ಜಿತ ಕ್ರೀಡಾಂಗಣಕ್ಕಾಗಿ ಮೂರು ಎಕರೆ ಜಮೀನು ಮಂಜೂರು ಮಾಡಿದಕ್ಕೆ ಆಪ್ ಕೃತಜ್ಞತೆ ಸಲ್ಲಿಸುತ್ತದೆ ಎಂದರು. ಸ್ಪೋರ್ಟ್ಸ್ ವಿಶ್ವ ವಿದ್ಯಾಲಯ ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದರು. ವಿನಯ ನಾಯಕ ಅವರು ಬೆಳಗಾವಿ ನಗರ ಕ್ರೀಡಾ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು ಆಪ್ ಬೆಳಗಾವಿ ಉಸ್ತುವಾರಿ ಲಕ್ಷ್ಮೀಕಾಂತ ರಾವ್ ಹೇಳಿದರು.

Read More Articles