ಪಾಲಿಕೆ ಚುನಾವಣೆ: ಗಲ್ಲಿ ಗಲ್ಲಿಯಲ್ಲಿಯೂ ಗಜಾನನ ಪ್ರಚಾರ
- 8 Jan 2024 , 10:30 PM
- Belagavi
- 108
ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆ ಕಾವು ಜೋರಾಗಿದ್ದು, ವಾಡ್ ನಂಬರ್ 11ರ ಬಿಜೆಪಿಯ ಅಭ್ಯರ್ಥಿ ಗಜಾನನ ಮಿಸಳೆ ನಗರದ ಸದಾಶಿವ ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಕೇಂದ್ರ, ರಾಜ್ಯ ಸರಕಾರದ ಕೊಡುಗೆ ಹಾಗೂ ಸ್ಥಳೀಯ ಶಾಸಕ ಅನಿಲ್ ಬೆನಕೆ ಅವರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿ ಮಾಡಿಕೊಟ್ಟು ಮನೆ ಮನೆಗೆ ಪ್ರಚಾರ ಕೈಗೊಂಡಿದ್ದಾರೆ.

ಭಾನುವಾರ ನಗರದ ವಾಟರ್ ಬೋಡ್೯ ಕಾಂಪೌಂಡ್, ವಿಶ್ವೇಶ್ವರಯ್ಯ ನಗರ, ಆದರ್ಶ ಕಾಲೋನಿ, ಜಿಲ್ಲಾಸ್ಪತ್ರೆಯ ಸುತ್ತಮುತ್ತಲಿನ ಪ್ರದೇಶ, ಅರಣ್ಯ ಪ್ರದೇಶದ ವಸತಿ ನಿಲಯಗಳಲ್ಲಿ ಪ್ರಚಾರ ನಡೆಸಿ ಮತ ಯಾಚಿಸಿದರು.










