ಫಿಟನೆಸ್ ಪ್ರಿಯರಿಗೆ ಮೇಡ್ ಇನ್ ಇಂಡಿಯಾ ಆಪ್

  • 30 Dec 2023 , 5:54 PM
  • Delhi
  • 99

ದೆಹಲಿರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಫಿಟ್ ಇಂಡಿಯಾ ಎರಡನೇ ವಾರ್ಷಿಕೋತ್ಸವ ಮತ್ತು ಆಜಾ಼ದಿ ಕಾ ಅಮೃತ್ ಮಹೋತ್ಸವ್ ಅಂಗವಾಗಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಶ‍್ರೀ ಅನುರಾಗ್ ಠಾಕೂರ್ ಫಿಟ್ ಇಂಡಿಯಾ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದರು.

promotions
logintomyvoice

ಮೊಬೈಲ್ ಆ‍್ಯಪ್ ಬಿಡುಗಡೆಗೂ ಮುನ್ನ ಅನುರಾಗ್ ಠಾಕೂರವರು ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೇಜರ್ ಧ್ಯಾನ್ ಚಂದ್ ಅವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದರು.

promotions

ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ ನಂತರ ಆ್ಯಪ್ ಬಳಕೆ ಕುರಿತು ಮಾಹಿತಿ ನೀಡಲಾಯಿತು. ಫಿಟ್ ಇಂಡಿಯಾ ಆ್ಯಪ್ ಉಚಿತವಾಗಿದ್ದು, ಇಂಗ್ಲೀಷ್ ಹಾಗೂ ಹಿಂದಿಯಲ್ಲಿ ಮತ್ತು ಆಂಡ್ರಾಯ್ಡ್ ಮತ್ತು ಐ.ಓ.ಎಸ್ ವೇದಿಕೆಗಳಲ್ಲಿ ಇದು ಲಭ್ಯವಿದೆ. ಇದನ್ನು ಬೇಸಿಕ್ ಸ್ಮಾರ್ಟ್ ಫೋನ್ ಗಳಲ್ಲೂ ಕಾರ್ಯನಿರ್ವಹಿಸುವಂತೆ ಅಭಿವೃದ್ಧಿಪಡಿಸಲಾಗಿದೆ.

logintomyvoice

ಫಿಟ್ ಇಂಡಿಯಾ ಮೊಬೈಲ್ ಆ್ಯಪ್ ಪ್ರತಿಯೊಬ್ಬ ಭಾರತೀಯನ ಅಂಗೈಯಲ್ಲಿ ಫಿಟ್ನೆಸ್ ಮಟ್ಟವನ್ನು ಸುಲಭವಾಗಿ ಅಳೆಯಬಹುದಾಗಿದೆ. ಇದರಲ್ಲಿ ಕೆಲವು ಅಸಾಧಾರಣ ವೈಶಿಷ್ಟ್ಯಗಳಿದ್ದು, “ಫಿಟ್ನೆಸ್ ಸ್ಕೋರ್”, ಅನಿಮೇಟೆಡ್ ವಿಡಿಯೋಸ್, ಆಕ್ಟಿವಿಟಿ ಟ್ರಾಕರ್ಸ್ ಮತ್ತು ಮೈ ಪ್ಲಾನ್ ನಂತಹ ವೈಯಕ್ತಿಕವಾಗಿ ಬೇಕಾಗಿರುವ ಅಗತ್ಯಗಳನ್ನು ಇದು ಪೂರೈಸಲಿದೆ.

ಫಿಟ್ ಇಂಡಿಯಾ ಆಪನ್ ವೈಶಿಷ್ಟತೆ
ಪ್ರತಿಯೊಬ್ಬರ ದೈಹಿಕ ಪರಿಸ್ಥಿತಿ, ಜೀವನ ಶೈಲಿ, ವಯೋಮತಿಗೆ ಅನುಗುಣವಾಗಿ ಪ್ರತಿಯೊಬ್ಬರಿಗೂ ವಿಭಿನ್ನ ಆಹಾರ, ನೀರು ಮತ್ತು ಚಟುವಟಿಕೆ ಅಗತ್ಯವಾಗಿದೆ. ಫಿಟ್ ಇಂಡಿಯಾದ ಮೊಬೈಲ್ ಆ್ಯಪ್ ನ “ಮೈ ಪ್ಲಾನ್ “ ನಲ್ಲಿ ಪ್ರತಿಯೊಬ್ಬ ವ್ಯಕ್ತಿ ತಮ್ಮ ಪ್ರಸ್ತುತ ಜೀವನ ಶೈಲಿಯನ್ನು ವ್ಯಾಖ್ಯಾನಿಸಲು ಅವಕಾಶ ಮಾಡಿಕೊಡುತ್ತದೆ. ದೈಹಿಕ ಚಟುವಟಿಕೆಗೆ ಎಷ್ಟು ಸಮಯ ವಿನಿಯೋಗಿಸಬೇಕು, ಎಷ್ಟು ನೀರುಸೇವಿಸಬೇಕು, ನಿದ್ರೆ, ಪ್ರಸ್ತುತ ದೇಹ ತೂಕ ಮತ್ತು ಎತ್ತರಕ್ಕೆ ತಕ್ಕಂತೆ ಎಷ್ಟು ತೂಕ ಇರಬೇಕು. ಆಹಾರ ಸೇವನೆಯ ಯೋಜನೆ, ಗುರಿಗಳನ್ನು ತಲುಪಲು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಕುರಿತು ಮಾಹಿತಿ ನೀಡಲಿದೆ. ಫಿಟ್ ಇಂಡಿಯಾ ಮೊಬೈಲ್ ಆ್ಯಪ್ ಭಾರತೀಯ ಆಹಾರ ಯೋಜನೆ, ಎಷ್ಟು ಲೋಟ ನೀರು ಸೇವನೆ, ಎಷ್ಟು ಗಂಟೆ ನಿದ್ರೆ ಮಾಡಬೇಕು ಎನ್ನುವ ಕುರಿತೂ ವಿವರ ನೀಡಲಿದೆ.

ಆಂಡ್ರಾಯ್ಡ್ ಆಪ್ ಗಾಗಿ ಕ್ಲಿಕ್ ಮಾಡಿ
ಐಓಎಸ್ ಆಪ್ ಗಾಗಿ ಕ್ಲಿಕ್ ಮಾಡಿ

ಆಕ್ಟಿವಿಟಿ ಟ್ರಾಕರ್ ಅಪ್ಲಿಕೇಶನ್ ವ್ಯಕ್ತಿಗಳಿಗೆ ತಮ್ಮ ದೈನಂದಿನ ಚಟುವಟಿಕೆ ಮಟ್ಟವನ್ನು ಗಮನದಲ್ಲಿಟ್ಟುಕೊಳ‍್ಳಲು ನೆರವಾಗುತ್ತದೆ. ನೈಜ ಸಮಯದ ಸ್ಟೆಪ್ ಟ್ರಾಕರ್ ವ್ಯಕ್ತಿಗಳಿಗೆ ತಮ್ಮ ದೈನಂದಿನ ಹಂತಗಳನ್ನು ಅನುಸರಿಸಲು ಸಹಾಯ ಮಾಡುತ್ತದೆ ಮತ್ತು ತಮಗಾಗಿ ಉನ್ನತ ಗುರಿಗಳನ್ನು ಹೊಂದಲು ಪ್ರೋತ್ಸಾಹಿಸುತ್ತದೆ. ವ್ಯಕ್ತಿಗಳು ತಮ್ಮ ದೈನಂದಿನ ಕ್ಯಾಲೊರಿ, ನೀರು ಸೇವನೆ ಮತ್ತು ನಿದ್ರೆಯ ಅವಧಿ ಕುರಿತು ವಿವರ ನೀಡಲಿದೆ.

ವ್ಯಕ್ತಿಗಳು ಪ್ರತಿಗಂಟೆಯ ರಿಮೈಂಡರ್ ಗಳನ್ನು ಅಳವಡಿಸಿಕೊಂಡು ಪಿಟ್ನೆಸ್ ನ ಅಂಕಗಳನ್ನು ಸಾಧಿಸಲು ನೆರವಾಗುತ್ತದೆ. ತಮ್ಮ ದೈನಂದಿನ ಫಿಟ್ನೆಸ್ ಮತ್ತು ಚಟುವಟಿಕೆಗಳ ದತ್ತಾಂಶಗಳ ಮೂಲಕ ಚಟುವಟಿಕೆಗಳನ್ನು ಕೈಗೊಳ್ಳಲು ಮತ್ತು ಹೆಚ್ಚು ಜನರನ್ನು ಫಿಟ್ನೇಸ್ ವ್ಯಾಪ್ತಿಗೆ ತರಲು, ಜೀವನ ಶೈಲಿಯಲ್ಲಿ ಬದಲಾವಣೆ ತರಲು ಸಹಕಾರಿಯಾಗಲಿದೆ.

Read More Articles