ಬೆಳಗಾವಿ ಗ್ರಾಮೀಣ ಕ್ಷೇತ್ರದ 23 ಗ್ರಾಮಗಳಲ್ಲಿ ನೂರಕ್ಕೆ ನೂರು ವ್ಯಾಕ್ಸಿನೇಶನ್: ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಮೋಘ ಸಾಧನೆ

ಬೆಳಗಾವಿ:ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ 23 ಗ್ರಾಮಗಳಲ್ಲಿ ನೂರಕ್ಕೆ ನೂರರಷ್ಟು ಮೊದಲ ಡೋಸ್ ವ್ಯಾಕ್ಸಿನೇಶನ್ ಪೂರ್ಣಗೊಂಡಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಅಮೋಘ ಸಾಧನೆ ಮಾಡಿದಂತಾಗಿದೆ.

promotions

ಬೆಳಗುಂದಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬೆಳಗುಂದಿ, ಬೋಕನೂರು, ಬೆಳವಟ್ಟಿ, ಬಡಸ್, ಬಕನೂರು, ಗಣೇಶಪುರ, ಜ್ಯೋತಿನಗರ, ಸೋನೋಳಿ, ಎಳೆಬೈಲ್, ರಕ್ಕಸಕೊಪ್ಪ, ದಾಮಣೆ, ಉಚಗಾಂವ್ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಕೋನೇವಾಡಿ, ಬೆಕ್ಕಿನಕೇರಿ, ಬಸುರ್ತೆ, ಕಲ್ಲೇಹೊಳ, ಅಂಬೇವಾಡಿ, ಸುಳಗಾ, ಕುದ್ರೇಮನಿ, ಮುತಗಾ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಸಾಂಬ್ರಾ, ಹಂದಿಗನೂರು ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಅಲತಗಾ, ಬೆಂಡಿಗೇರಿ ಪ್ರಾಥಮಿಕ ಕೇಂದ್ರ ವ್ಯಾಪ್ತಿಯ ಬೆಂಡಿಗೇರಿ, ಹಿರೇಬಾಗೇವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕಲಾರಕೊಪ್ಪ, ಮಾಸ್ತಮರಡಿ ಗ್ರಾಮಗಳಲ್ಲಿ ಶೇ.100ರಷ್ಟು ಮೊದಲ ಡೋಸ್ ಲಸಿಕಾಕರಣವಾಗಿದೆ.

promotions

ಇನ್ನುಳಿದ ಗ್ರಾಮಗಳಲ್ಲಿ ಕೂಡ ಶೇ.90ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಲಸಿಕಾಕರಣವಾಗಿದೆ. ಆ ಎಲ್ಲ ಗ್ರಾಮಗಳಲ್ಲಿ ಇನ್ನು ಒಂದೆರಡು ವಾರದಲ್ಲಿ ಸಂಪೂರ್ಣ ಲಸಿಕಾಕರಣ ಮಾಡುವ ಗುರಿಯನ್ನು ಹೆಬ್ಬಾಳಕರ್ ಹಾಕಿಕೊಂಡಿದ್ದಾರೆ. ಅಲ್ಲದೆ, ಕ್ಷೇತ್ರ ವ್ಯಾಪ್ತಿಯಲ್ಲಿ 2ನೇ ಡೋಸ್ ಕೂಡ ಶೇ. 26ಕ್ಕಿಂತ ಹೆಚ್ಚಾಗಿದ್ದು, 84 ದಿನ ಪೂರ್ಣವಾಗುತ್ತಿದ್ದಂತೆ ಎಲ್ಲರಿಗೂ 2ನೇ ಡೋಸ್ ಲಸಿಕೆ ನೀಡಲಾಗುತ್ತಿದೆ.

ಕ್ಷೇತ್ರದಲ್ಲಿ ನೂರಕ್ಕೆ ನೂರರಷ್ಟು ವ್ಯಾಕ್ಸಿನೇಶನ್ ಹಾಕಿಸುವ ಗುರಿ ಹಾಕಿಕೊಂಡು ದೊಡ್ಡ ಅಭಿಯಾನವನ್ನೇ ಹಮ್ಮಿಕೊಂಡಿರುವ ಲಕ್ಷ್ಮಿ ಹೆಬ್ಬಾಳಕರ್, ಇದಕ್ಕಾಗಿ ತಮ್ಮ ಕಾರ್ಯಕರ್ತರ ಪಡೆಯನ್ನೇ ರಚಿಸಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ.ಮಾಸ್ತಿಹೊಳಿ ಅವರ ನೇತೃತ್ವದ ಆರೋಗ್ಯ ಇಲಾಖೆಯ ಸಿಬ್ಬಂದಿಯ ಸಹಕಾರ ಹಾಗೂ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಬೇರೆಲ್ಲೂ ಆಗದಂತಹ ದೊಡ್ಡ ಸಾಧನೆಯನ್ನು ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮಾಡಿದ್ದಾರೆ.

Read More Articles