ಬೆಳಗಾವಿ ಜಿಲ್ಲೆಯಲ್ಲಿ ಐನೂರರ ಗಡಿ ದಾಟಿದ ಕೊರೋನಾ ಇಂದು ಒಂದೇ ದಿನ 64 ಪಾಸಿಟಿವ್ ಕೇಸ್
- 15 Jan 2024 , 5:09 AM
- Belagavi
- 116
ಬೆಳಗಾವಿ: ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕೊರೊನಾ ಮಹಾಮಾರಿ ಇಂದು ಒಂದೇ ದಿನ ಮತ್ತೆ 64 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿವೇ ಕೊರೋನಾ ಕಾಟ ಇಂದು ಜಿಲ್ಲೆಯಲ್ಲಿ ತಲ್ಲಣ ಮುಡಿಸಿದೆ. ಈವರೆಗೂ ಬೆಳಗಾವಿ ಜಿಲ್ಲೆಯಲ್ಲಿ ಬಲಿಯಾದವರ ಸಂಖ್ಯೆ 14 ಕ್ಕೇರಿದ್ದು ಜಿಲ್ಲೆಯಲ್ಲಿ ಕೊರೊನಾ ಕೇಸ್ 561 ಕ್ಕೆ ಏರಿಕೆ ಯಾಗಿದೆ. ಕೊರೋನಾ ಮಾಹಾಮಾರಿ ಸದ್ಯ ಬೆಳಗಾವಿಯಲ್ಲಿ ಐನೂರರ ಗಡಿ ದಾಟಿದೆ. ಇದರಲ್ಲಿ 185 ಕೊರೊನಾ ಕೇಸ್ ಆಕ್ಟಿವ್ ಇದ್ದು 362 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಬೆಳಗಾವಿಯ ಬೀಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ.












