ಕೊರೊನಾ ನಿಗ್ರಹಿಸುವಲ್ಲಿ ಅಧಿಕಾರಿಗಳ ಎಡವಟ್ಟು! ಮುಂದೆ ಕಾದಿದೆಯಾ ಮಹಾ ಗಂಡಾಂತರ..?
- 14 Jan 2024 , 11:50 PM
- Belagavi
- 100
ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರ ತವರೂರಾಗಿರುವ ಈ ಕ್ಷೇತ್ರದಲ್ಲಿ ಸಮಸ್ಯೆ ಅವರೇ ಬಗೆಹರಿಸಬೇಕಾ? ಅಥವಾ ಕ್ಷೇತ್ರದ ಶಾಸಕರು ಏನು ಮಾಡುತ್ತಿದ್ದಾರೆ? ಶಾಸಕರು ಕೊರೋನಾ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎನ್ನುವ ಆಕ್ರೋಶ ಮಾತುಗಳು ಅಥಣಿಗರಲ್ಲಿ ಆವರಿಸಿದೆ.
ಜಾರ್ಖಂಡನಿಂದ ಮರಳಿದವರಿಗೆ ಕ್ವಾರಂಟೆನ್ ಮಾಡಲಾಗಿತ್ತು. ಅವರೆಲ್ಲರ ಸ್ಯಾಬ್ ಟೆಸ್ಟ ಕೂಡ ಮಾಡಲಾಗಿತ್ತು. ಆದರೆ, ಪ್ರಯೋಗಾಲಯದ ವರದಿ ಬರುವ ಮುನ್ನವೇ ತಾಲೂಕಾಡಳಿತ ಕ್ವಾರಂಟೆನ್ ಇದ್ದ ಕೆಲವರನ್ನು ಮನೆಗೆ ಕಳುಹಿಸಿ ಮಹಾ ಎಡವಟ್ಟು ಮಾಡಿಬಿಟ್ಟಿದೆ.
ಮೇ.6ರಂದು ಜಾರ್ಖಂಡ್ ನಿಂದ ಅಥಣಿಗೆ ಬಂದಿದ್ದ 44 ಜನರನ್ನು ಹದಿನಾಲ್ಕು ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದರು. ಮೇ.20 ರಂದು ಅವರು ಮನೆಗೆ ತೆರಳಿದ್ದರು. ಆದರೆ ಮೇ.20 ಕ್ಕೆ ಊರಿಗೆ ತೆರಳಿದ ಬಳಿಕ ತಮ್ಮ ಊರು ಸೇರಿದಂತೆ ಅಥಣಿ ತಾಲೂಕಿನಲ್ಲಿ ಮಾರ್ಕೆಟ್ ಹಾಗೂ ಅಕ್ಕಪಕ್ಕದ ಗ್ರಾಮದಲ್ಲಿ ಓಡಾಟ ನಡೆಸಿದ್ದಾರೆ. ಇವರಲ್ಲೇ ನಿನ್ನೆ 13 ಜನರಿಗೆ ಇಂದು ಸೊಂಕು ಧೃಡವಾಗಿದ್ದು. ಸವದಿ, ಬೆಳವಕ್ಕಿ, ನಂದಗಾಂವ, ಝುಂಜರವಾಡ ಗ್ರಾಮದವರಾಗಿದ್ದಾರೆ. ಇದರಿಂದಾಗಿ ಅಕ್ಕಪಕ್ಕದ ಗ್ರಾಮಸ್ಥರಿಗೆ ಸಂಕಷ್ಟವಾಗಿದ್ದು ಅಥಣಿ ತಹಶಿಲ್ದಾರ ವಿರುದ್ಧ ಗ್ರಾಮಸ್ಥರ ಆಕ್ರೋಶ ವ್ಯಕ್ತವಾಗಿದೆ.
ಇದಕ್ಕೆ ತಾಲೂಕಾಡಳಿತದ ವೈಫಲ್ಯವೇ ಕಾರಣ ಎನ್ನಲಾಗುತ್ತಿದ್ದು ಇವರನ್ನು ಕೇಳಿದರೆ ನಮ್ಮ ಸಿಬ್ಬಂದಿಗಳ ಕಣ್ಣು ತಪ್ಪಿಸಿ ಕ್ವಾರಂಟೆನ್ ನಲ್ಲಿದ್ದ ಕೆಲವು ಜನ ಹೋಗಿದ್ದರು. ನಂತರ ಅವರನ್ನು ವಾಪಸ್ ಕರೆಯಿಸಿ ಎಲ್ಲ ಪ್ರಾಥಮಿಕ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ಹಾರಿಕೆ ಉತ್ತರ ನೀಡುತ್ತಿರುವ ಅಥಣಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಂಗಾರಪ್ಪ ಮಾಧ್ಯಮದ ಮುಂದೆ ಒಪ್ಪಿಕೊಂಡಿದ್ದಾರೆ. ಕರ್ತವ್ಯ ನಿರ್ಲಕ್ಷ್ಯ ಮಾಡಿದ ಸಿಬ್ಬಂದಿಗಳನ್ನು ಅಮಾನತ್ತು ಮಾಡುವ ಚಿಂತನೆ ನಡೆಯುತ್ತಿದೆ ಎಂದೂ ಹೇಳಿದ್ದಾರೆ.
ಈ ಘಟನೆಯ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಅಥಣಿ ತಹಶಿಲ್ದಾರ ದುಂಡಪ್ಪ ಕೋಮಾರ ಅವರಿಗೆ ಸಮಗ್ರ ವರದಿ ಕಾರಣ ಕೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.











