ಮದುವೆಯಾದ ಗಂಡಸರೇ ಹುಷಾರ್... ನಿಮ್ಮ ಪತ್ನಿಗೆ ಏಕವಚನದಲ್ಲಿ ಮಾತನಾಡಿದ್ರೆ ಬಿಳುತ್ತೆ ಕೇಸ್...!

ಬೆಂಗಳೂರು: ಸಾಮಾನ್ಯವಾಗಿ ಪತಿ ಮಹಾಶಯರು ತಮ್ಮ ಪತ್ನಿಯರಿಗೆ ಲೆ, ಹೋಗೇ, ಬಾರೇ ಎಂದು ಕರೆಯುವುದು ವಾಡಿಕೆ. ಆದರೆ ಮನೆಯಲ್ಲಿ ಅಥವಾ ಸಾರ್ವಜನಿಕ ಸ್ಥಳದಲ್ಲಿ ನಿಮ್ಮ ಪತ್ನಿಗೆ ಹೀಗೆ ಏಕವಚನದಲ್ಲಿ ಕರೆದರೆ ನಿಮ್ಮ ಮೇಲೆ ಕೇಸ್ ಕೂಡಾ ದಾಖಲಾಗಬಹುದು.

promotions

ಹೌದು ಪತ್ನಿಯನ್ನು ಪತಿಯಾದವನು ಲೇ, ಹೋಗೇ, ಬಾರೇ ಎಂದು ಕರೆಯುವಂತಿಲ್ಲ. ಮನೆಯಲ್ಲಿರುವ ಸಣ್ಣ ಹೆಣ್ಣು ಮಗುವಿನಿಂದ ಹಿಡಿದು ಅಜ್ಜಿಯವರೆಗೆ ಯಾರನ್ನೂ ಏಕವಚನದಲ್ಲಿ ಕರೆಯುವಂತಿಲ್ಲ. ಅಕಸ್ಮಾತ್ ಏಕವಚನ ಬಳಸಿದ್ದೇ ಆದರೆ ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬಹುದು.

promotions

ಕಳೆದ 2005ರ ರಿಂದ ಈ ರೀತಿಯ ಕಾನೂನು ಜಾರಿಯಲ್ಲಿದೆ. ಕೇಂದ್ರ ಸರ್ಕಾರ 2005 ರಲ್ಲಿ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯನ್ನು ಜಾರಿಗೆ ತಂದಿತ್ತು. ಅದರಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ಅಂಶಗಳನ್ನು ಸೇರ್ಪಡೆ ಮಾಡಲಾಗಿತ್ತು.

ಈಗ ಈ ಕಾಯ್ದೆಯನ್ನು ಕೆಲವು ಮಹಿಳೆಯರು ದುರ್ಬಳಕೆ ಮಾಡಿಕೊಂಡು ಕೇಸ್ ದಾಖಲಿಸುತ್ತಿರುವ ಪ್ರಮಾಣ ಹೆಚ್ಚುತ್ತಿದೆ. ಅದರಲ್ಲೂ ಕಳೆದ ವರ್ಷ ಲಾಕಡೌನ್ ಸಮಯದಲ್ಲಿ ಗೃಹ ಹಿಂಸೆ ಕೇಸ್ ಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಗೃಹ ಹಿಂಸೆ ಪ್ರಕರಣಗಳ ಸಂಖ್ಯೆ ಶೇ. 15 ರಿಂದ 20 ರಷ್ಟು ಹೆಚ್ಚಾಗಿದೆ. ದಾಖಲೆಗಳ ಪ್ರಕರಾರ 2020 ರಲ್ಲಿ 23,722 ಪ್ರಕರಣಗಳು ದಾಖಲಾಗಿದ್ದರೆ, ಈ ವರ್ಷ ಇದುವರೆಗೆ 20,368 ಪ್ರಕರಣಗಳು ದಾಖಲಾಗಿದ್ದು, ವರ್ಷಾಂತ್ಯದ ವೇಳೆ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.

ಈ ಕಾಯ್ದೆಯನ್ವಯ ಪತ್ನಿಯ ಸಮ್ಮಿತಿಯಿಲ್ಲದೆ ಲೈಂಗಿಕ ಸಂಪರ್ಕ ಮಾಡುವುದೂ ಸಹ ಗೃಹ ಹಿಂಸೆಯಾಗಿ ಪರಿಗಣನೆಯಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರನ್ನು ದಿಟ್ಟಿಸಿ ನೋಡುವಂತಿಲ್ಲ. ಅದೇ ವಿಧದಲ್ಲಿ ಮನೆಯಲ್ಲಿ ಹೆಣ್ಣುಮಕ್ಕಳನ್ನು ಕೆಟ್ಟ ದೃಷ್ಟಿಯಿಂದ ದಿಟ್ಟಿಸಿ ನೋಡುವಂತಿಲ್ಲ. ಮನೆಯಲ್ಲಿರುವ ಪ್ರತಿಯೊಬ್ಬ ಮಹಿಳೆ, ಹೆಣ್ಣು ಮಗುವಿಗೆ ಏಕವಚನ ಬಳಸುವಂತಿಲ್ಲ, ಬಹುವಚನವನ್ನೇ ಬಳಸಬೇಕು. ಗಂಡು ಮಗು ಹೆರದಿರುವ ಕುರಿತು ಮೂದಲಿಸುವುದು, ಹೆಣ್ಣುಮಕ್ಕಳ ಪ್ರೀತಿಪಾತ್ರರಿಗೆ ದೈಹಿಕ ನೋವುಂಟು ಮಾಡುವುದಕ್ಕೂ ಕಾಯ್ದೆಯಲ್ಲಿ ಅವಕಾಶವಿಲ್ಲ.

Read More Articles