ಕಾಶ್ಮೀರ ಇನ್ನೊಂದು ಅಫ್ಘಾನಿಸ್ತಾನವಾಗದಿರಲು ಭಾರತೀಯ ಸೇನೆಯ್ ಬಲಿ ದಾನವೇ ಕಾರಣ:ಯುಕೆ ಪಾರ್ಲಿಮೆಂಟ್

  • 17 Dec 2023 , 11:10 PM
  • world
  • 201

ಲಂಡನ್ :ಜಮ್ಮು ಮತ್ತು ಕಾಶ್ಮೀರ ಪ್ರದೇಶವು ತಾಲಿಬಾನ್ ಆಕ್ರಮಿತ ಅಫ್ಘಾನಿಸ್ತಾನವನ್ನು ಎಂದಿಗೂ ಹೋಲುವುದಿಲ್ಲ ಮತ್ತು ಇದಕ್ಕೆ ಭಾರತೀಯ ಸೇನೆಯೇ ಕಾರಣ ಎಂದು ಬ್ರಿಟಿಷ್ ಸಂಸತ್ ಸದಸ್ಯ ಬಾಬ್ ಬ್ಲಾಕ್‌ಮ್ಯಾನ್ ಯುಕೆ ಸಂಸತ್ತಿನಲ್ಲಿ ಹೇಳಿದ್ದಾರೆ.

promotions

ಯುಕೆ ಹೌಸ್ ಆಫ್ ಕಾಮನ್ಸ್ ನಲ್ಲಿ ಮಾತನಾಡುತ್ತಾ ಜಮ್ಮು ಮತ್ತು ಕಾಶ್ಮೀರದಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯು ಚರ್ಚೆಗೆ ಪ್ರತಿಕ್ರಿಯೆಯಾಗಿ ಬ್ಲ್ಯಾಕ್ಮನ್ ಭಾರತವು ತನ್ನ ಸೈನ್ಯವನ್ನು ಜೆ & ಕೆ ದಿಂದ ಹಿಂತೆಗೆದುಕೊಂಡರೆ ಇಸ್ಲಾಮಿಸ್ಟ್ ಭಯೋತ್ಪಾದಕರ ಪಡೆಗಳು ಕಾಶ್ಮೀರದಿಂದ ಪ್ರಜಾಪ್ರಭುತ್ವವನ್ನು ಕಿತ್ತು ಹಾಕುತ್ತಾರೆ ಎಂದು ಹೇಳಿದರು.

promotions

ತನ್ನ ಪ್ರತಿಕ್ರಿಯೆಯಲ್ಲಿ ಬ್ಲ್ಯಾಕ್‌ಮ್ಯಾನ್ ಕಾಶ್ಮೀರವು ಅನೇಕ ಭಯೋತ್ಪಾದಕ ದಾಳಿಗಳು, ಕೊಲೆಗಳು ಮತ್ತು ಬಲವಂತದ ಇಸ್ಲಾಮಿಕ್ ಮತಾಂತರಗಳಿಂದ "ಕಳಂಕಿತವಾಗಿದೆ" ಎಂದು ಹೇಳಿದರು.

"ಕಾಶ್ಮೀರ ಕಣಿವೆಯು ಮುಸ್ಲಿಂ ಪ್ರಾಬಲ್ಯ ವಾಗಿದ್ದರೂ, ಜಮ್ಮುವಿನಲ್ಲಿ ಮುಖ್ಯವಾಗಿ ಹಿಂದು ಮತ್ತು ಲಡಾಖ್ ಬೌದ್ಧ ಧರ್ಮದವರು ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು ಮತ್ತು ಐತಿಹಾಸಿಕವಾಗಿ ಹಿಂದೂಗಳು, ಸಿಖ್ಖರು, ಕ್ರಿಶ್ಚಿಯನ್ನರು ಹಾಗು ಮಹಿಳೆಯರು ಮತ್ತು ಮಕ್ಕಳು ಕಿರುಕುಳಕ್ಕೊಳಗಾದವರು ಎಂದು ಹೇಳಿದರು

"ಭಾರತೀಯ ಸೇನೆ ಮತ್ತು ಭಾರತೀಯ ಮಿಲಿಟರಿ ಪ್ರಜಾಪ್ರಭುತ್ವದ ಧ್ವನಿ ಮತ್ತು ಜಮ್ಮು ಮತ್ತು ಕಾಶ್ಮೀರ ಪ್ರದೇಶವನ್ನು ತಾಲಿಬಾನ್ ಆಕ್ರಮಿತ ಅಫ್ಘಾನಿಸ್ತಾನವನ್ನು ಹೋಲುವಂತೆ ಆಗುವುದನ್ನು ನಿಲ್ಲಿಸಿದೆ" ಎಂದು ಬ್ಲಾಕ್‌ಮ್ಯಾನ್ ಹೇಳಿದರು, "ಈ ಪ್ರದೇಶವು ಭಾರತದ ಕಾನೂನುಬದ್ಧ ಮತ್ತು ಭಾರತಿಯ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ ಎಂದು ಒತ್ತಿ ಹೇಳಿದರು.

Read More Articles