ಲಾಕ್ ಡೌನ್ ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ

ಬೈಲಹೊಂಗಲ : ಪಟ್ಟಣದ ಪ್ರಭು ನಗರದಲ್ಲಿ 45 ವರ್ಷದ ಮಹಿಳೆಗೆ ಗುರುವಾರ ಕೊರೊನಾ ಪಾಸಿಟಿವ್ ವರದಿ ಬಂದಿದ್ದರಿಂದ ಮಹಿಳೆಯನ್ನು ಬೆಳಗಾವಿ ಬಿಮ್ಸ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ . ಈ ಮೊದಲು ಮಹಿಳೆಯ ಮಗ ಯೋಧನಿಗೆ ಕೊರೊನಾ ಪಾಸಿಟಿವ್ ಆಗಿತ್ತು . ಇದಕ್ಕೆ ಸಂಬಂಧಿತ 10 ಜನರನ್ನು ಸ್ಥಳೀಯ ಹಾಸ್ಟೆಲ್ನಲ್ಲಿ ಕ್ವಾರೆಂಟೈನ್ ಮಾಡಲಾಗಿದೆ . ಕೊರೊನಾ ಪಾಸಿಟಿವ್ ಆದ ಮನೆಯ ಏರಿಯಾಕ್ಕೆ ತಾಲೂಕಾ ಆರೋಗ್ಯಾಧಿಕಾರಿ ಡಾ.ಎಸ್ . ಎಸ್.ಸಿದ್ದನ್ನವರ , ಪರಿಸರ ಅಭಿಯಂತರ ಸತೀಶ ಕಬ್ಬಿಡೋಣಿ , ಸಿಪಿಐ ಉಳವಪ್ಪ ಸಾತೇನಹಳ್ಳಿ , ಪಿಎಸ್‌ಐ ಈರಪ್ಪ ರಿತ್ತಿ ಹಾಗೂ ಇತರ ಅಧಿಕಾರಿಗಳು , ಸಿಬ್ಬಂದಿ ಭೇಟಿ ನೀಡಿದರು . ಪ್ರಭು ನಗರದಲ್ಲಿ ಪುರಸಭೆಯಿಂದ ಸ್ಯಾನಿಟೈಸರ್‌ ಮಾಡಲಾಯಿತು . ಪಟ್ಟಣದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರ ಹಿನ್ನೆಲೆಯಲ್ಲಿ ತಾಲೂಕಾಡಳಿತ ಮತ್ತು ವ್ಯಾಪಾರಸ್ಥರ ಸಂಘದವರು ಮಧ್ಯಾಹ್ನ 12 ರ ನಂತರ ಕರೆ ನೀಡಿದ್ದ ಲಾಕ್‌ಡೌನ್ ಗುರುವಾರ ಯಶಸ್ವಿಯಾಯಿತು . ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಲಾಗಿತ್ತು . ಖಾಸಗಿ ವಾಹನ ಸಂಚಾರ ಸ್ಥಗಿತಗೊಂಡಿತ್ತು . ಪೊಲೀಸ್ ಅಧಿಕಾರಿಗಳು , ಸಿಬ್ಬಂದಿ ಬಿಗಿ ಬಂದೋಬಸ್ತ್ ಕೈಕೊಂಡಿದ್ದರು . ಬೆಳಗ್ಗೆ 7 ರಿಂದ ಮಧ್ಯಾಹ್ನ 12 ರ ವರೆಗೆ ವ್ಯಾಪಾರ , ವಹಿವಾಟು ನಡೆಯಿತು . ನಂತರದ ಲಾಕ್ ಡೌನ್ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು .

promotions

promotions

Read More Articles