ಕೋರೊನಾ ಕುಣಿತಕ್ಕೆ ನಲಗುತ್ತಿದೆ ಕುಂದಾನಗರಿ, ಯಾವ ತಾಲೂಕು ಎಷ್ಟು ? ಕಂಪ್ಲೀಟ್ ಡಿಟೇಲ್ಸ್

ಬೆಳಗಾವಿ: ಗಡಿನಾಡು ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಕೋರೊನಾ ತನ್ನ ಆರ್ಭಟ ಮುಂದುವರೆಸಿದೆ. ಇಂದು ಮತ್ತೆ ಒಂದೇ ದಿನ 95 ಕೋರೊನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಮತ್ತೆ ಕುಂದಾನಗರಿ ಜನರನ್ನು ಬೆಚ್ಚಿ ಬಿಳಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆ ಆಗಿದ್ದು. ಒಟ್ಟು 377 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ನಿಂದ ಇಂದು ನಾಲ್ಕು ಜನರು ಬಲಿಯಾಗಿದ್ದು ಸೇರಿ ಒಟ್ಟು 21 ಜನರು ಬಲಿಯಾಗಿದ್ದಾರೆ. ಸೋಂಕಿತರಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೋರೊನಾದಿಂದ ಕುಂದಾನಗರಿ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

promotions

promotions

Read More Articles