ಹುಕ್ಕೇರಿ ತಾಲೂಕಾ ಲಾಕಡೌನ್ ಸಾರ್ವಜನಿಕ ಪ್ರಕಟಣೆ ವಿಷಯ
- 6 Jan 2024 , 4:49 AM
- Belagavi
- 141
ಹುಕ್ಕೇರಿ: ಕೊರೋನಾ ಅಟ್ಟಹಾಸ ಇಡೀ ದೇಶದಲ್ಲಿ ಮುಂದು ವರೆದಿದೆ ಕೊರೋನಾ ವೈರಸ್ ತಡೆಗಟ್ಟಲು ಸರ್ಕಾರದ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಬೆಳಗಾವಿ ಹುಕ್ಕೇರಿ ತಾಲೂಕಿನಲ್ಲಿಯು ದಿನಕ್ಕೊಂದರಂತೆ ಕೊರೋನಾ ಸೋಂಕು ಹೆಚ್ಚುತ್ತಿದೆ. ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ನಿರ್ಣಯಿಸಿದಂತೆ ಹುಕ್ಕೇರಿ ತಾಲೂಕಿನಲ್ಲಿ ಕರೋನಾ ಪಾಸಿಟಿವ್ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಇಡೀ ತಾಲೂಕನ್ನು ಲಾಕಡೌನ ಮಾಡಲು ನಿರ್ಣಯಿಸಲಾಗಿದೆ.

ದಿನಾಂಕ : 18.07.2020 ರ ರಾತ್ರಿ 8.00 ಗಂಟೆಯಿಂದ ದಿನಾಂಕ : 27.07.2020 ರ ಬೆಳಗಿನ ಜಾವ 05.00 ಗಂಟೆವರೆಗೆ ಸಂಪೂರ್ಣ ಲಾಕನ ಘೋಷಿಸಲಾಗಿದ್ದು , ಕಾರಣ ಸಾರ್ವಜನಿಕರು ದಿನನಿತ್ಯ ಅವಶ್ಯಕತೆಯಿರುವ ಸಾಮಗ್ರಿಗಳನ್ನು ದಿ: 18.07.2020 ರ ರಾತ್ರಿ 8.00 ಗಂಟೆಗೆ ಒಳಗಾಗಿ ಖರೀದಿಸಬೇಕೆಂದು ಈ ಮೂಲಕ ವಿನಂತಿಸಲಾಗಿದೆ .


ಲಾಕಡೌನ್ ಸಂಧರ್ಭದಲ್ಲಿ ಯಾರು ಯಾವುದೇ ರೀತಿಯ ಅಂಗಡಿಗಳನ್ನು ತೆರೆಯುವ ಹಾಗಿಲ್ಲ.ಲಾಕಡೌನ್ ವೇಳೆಯಲ್ಲಿ ಹಾಲು , ಆಸ್ಪತ್ರೆ , ಔಷಧಿ ಅಂಗಡಿಗಳು ಮಾತ್ರ ಲಭ್ಯ ಇರುತ್ತವೆ . ಲಾಕಡೌನ್ ವೇಳೆಯಲ್ಲಿ ಯಾರು ಮನೆಯಿಂದ ಹೊರಗಡೆ ಬರಬಾರದು.ಅವಶ್ಯಕತೆ ಇದ್ರೆ ಮಾತ್ರ ಹೊರಗಡೆ ಮಾಸ್ಕ ಧರಿಸಿ ಹೊರಗಡೆ ಬರಬೇಕು . ಒಂದು ವೇಳೆ ಕಾನೂನು ಉಲ್ಲಂಘನೆ ಮಾಡಿದ್ದಲ್ಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಸಾರ್ವಜನಿಕ ಪ್ರಕಟಣೆ ಹೋರಡಿಸಲಾಗಿದೆ.










