ತಳ್ಳೋ ಗಾಡಿಯಲ್ಲಿ ಪತಿಯ ಶವ ಸಾಗಿಸಿದ ಪತ್ನಿ

ಬೆಳಗಾವಿ: ಗಡಿನಾಡು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಅನಾರೋಗ್ಯದಿಂದ ಮೃತನಾದ ಪತಿಯ ಅಂತ್ಯ ಸಂಸ್ಕಾರಕ್ಕೆ ಯಾರು ಬರದಿದ್ದರಿಂದ ಪತ್ನಿಯೇ ತನ್ನ ಪತಿಯ ಶವವನ್ನು ತಳ್ಳೋ ಗಾಡಿಯಲ್ಲಿ ಸಾಗಿಸಿದ ಅಮಾನವೀಯ ಘಟನೆಗೆ ಅಥಣಿ ಪಟ್ಟಣ ಸಾಕ್ಷಿಯಾಗಿದೆ. ಕಿಲ್ಲರ್ ಕೋರೊನಾದ ಹಿನ್ನೆಲೆಯಲ್ಲಿ ಕರೋನ ಬಂದು ಸಾವನ್ನಪ್ಪಿರಬಹುದು ಎಂದು ಸಂಬಂಧಿಕರು ಸಹ ಬಂದಿಲ್ಲ. ಯಾರು ಬಾರದೆ ಇದ್ದಾಗ ತಾನೇ ಬಟ್ಟೆಯಲ್ಲಿ ಪತಿಯ ಶವ ಸುತ್ತಿ ಪರಿಚಯಸ್ಥ ವ್ಯಕ್ತಿಯ ಸಹಾಯದಿಂದ ತಳ್ಳುವ ಗಾಡಿಯಲ್ಲಿ ಶವವನ್ನು ಸಾಗಿಸಿ ಪತ್ನಿ ಹಾಗೂ 13 ವರ್ಷದ ಮಗ ಇಬ್ಬರು ಸೇರಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ಮೃತ ವ್ಯಕ್ತಿಯ ಹೆಸರು ಸದಾಶಿವ ಹಿರಟ್ಟಿ 55 ವರ್ಷ ವಯಸ್ಸಾಗಿತ್ತು ಅಥಣಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂದೆ ಚಪ್ಪಲಿ ಹೊಲಿದುಕೊಂಡು ಜೀವನ ಸಾಗಿಸುತ್ತಿದ್ದ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ. ಕಿಲ್ಲರ್ ಕೊರೊನಾ ಭಯದಿಂದ ಮಾನವೀಯತೆ ಹಾಗೂ ಸಂಬಂಧಗಳಿಗೇ ಬೆಲೆಯೇ ಇಲ್ಲ ಎನ್ನುವಂತಾಗಿದೆ.

promotions

promotions

Read More Articles