ಬೆಳಗಾವಿ ವರದಿ ದಿನಪತ್ರಿಕೆಗೆ ವರ್ಷದ ಸಂಭ್ರಮ

ಬೆಳಗಾವಿ ವರದಿ ದಿನ ಪತ್ರಿಕೆಯ ಸುದ್ದಿ ಉತ್ತಮ ಗುಣಮಟ್ಟದ್ದಾಗಿದೆ, ಬೆಳಗಾವಿ ವರದಿ ಇತರೆ ಕೆಲವು ಪತ್ರಿಕೆಗಳಂತೆ ಸುದ್ದಿಯನ್ನು ಎಳೆಯುವುದಿಲ್ಲ ಅಥವಾ ಹಿಗ್ಗಿಸುವುದಿಲ್ಲ, ಸುಳ್ಳು ಸುದ್ದೊಗಳನ್ನು ಪ್ರಕಟಿಸುವದಿಲ್ಲ.ಅವರು ಬಳಸುವ ಭಾಷೆ ಪರಿಷ್ಕೃತ, ಮತ್ತು ಶ್ರೇಷ್ಠವಾಗಿದೆ"

promotions

ಮೇಲಿನ ರೀತಿಯ ಪ್ರತಿಕ್ರಿಯೆ ಬೆಳಗಾವಿ ವರದಿ ಪತ್ರಿಕೆಯ (Belagavi Varadi) ಮೇಲಿನ ಓದುಗರ ಸಾಮಾನ್ಯ ಅಭಿಪ್ರಾಯವಾಗಿದೆ.ಇದರಿಂದಾಗಿ ದಿನಗಳೆದಂತೆ ಪತ್ರಿಕೆಯ ಪ್ರಸಾರ ಸಂಖ್ಯೆ ಹೆಚ್ಚುತ್ತ ಅತಿಹೆಚ್ಚು ಓದುಗರನ್ನು ತಲುಪಲಾಗುತ್ತಿದೆ ಎಂದು ಪತ್ರಿಕಾ ತಂಡ ತನ್ನ ಅಧಿಕೃತ ಪ್ರಕಟಣೆಯಲ್ಲಿ ಇಂದು ಹೇಳಿದೆ.

promotions

ಅಕ್ಟೋಬರ್ 18, 2020 ರಂದು ಬೆಳಗಾವಿ ವರದಿ ಪತ್ರಿಕೆ ಪ್ರಾರಂಭವಾದಾಗಿನಿಂದ, ಬೆಳಗಾವಿ ವರದಿ ಓದುಗರ ನಿರೀಕ್ಷೆಗೆ ತಕ್ಕ ಸತ್ಯ ನಿಷ್ಠ ವರದಿಗಳನ್ನು ನೀಡುತ್ತಿದೆ. ಕಡಿಮೆ ಅವಧಿಯಲ್ಲಿ ಅತಿಹೆಚ್ಚು ಓದುಗರ ಮನಗೆದ್ದಿದೆ. ವಿಶೇಷ ಅಂಕಣಗಳು,ಜನಪರ ಹಾಗೂ ಜೀವಪರ ಲೇಖನಗಳನ್ನು ಹೊತ್ತು ತರುವ ಬೆಳಗಾವಿ ವರದಿ ದಿನಪತ್ರಿಕೆ ಬೆಳಗಾವಿ ಜಿಲ್ಲೆ ಸೇರಿದಂತೆ ಎಲ್ಲಾ ತಾಲೂಕಗಳಿಗೆ ವರದಿಗಾರರ ನೇಮಕಮಾಡಿಕೊಳ್ಳುತ್ತಿದ್ದು ಆದಷ್ಟು ಬೇಗ ಪ್ರತಿ ಸುದ್ದಿ ಹಾಗೂ ಪ್ರತಿ ತಾಲೂಕು ವಿಷಯಗಳು ಪತ್ರಿಕೆ ನೀಡುತ್ತದೆ ಎಂದು ಪತ್ರಿಕಾ ತಂಡ ಭರವಸೆ ನೀಡಿದೆ.

ಪತ್ರಿಕಾ ಸಂಪಾದಕ ಸತೀಶ್ ಬಿಜಿ (Satish Basavani Gudagenatti) ಮಾತನಾಡಿ, ಪತ್ರಿಕೆ ಪ್ರಸಾರವಾಗಿ ಇಂದಿಗೆ ಒಂದು ವರ್ಷ ಪೂರೈಸಿದ್ದು ಓದುಗರ ಅಪೇಕ್ಷೆಯಂತೆ ಸಾಹಿತ್ಯ,ಮತ್ತು ಸಾಮಾಜಿಕ ಕಳಕಳಿಯ ಸುದ್ದಿಗಳ ಪ್ರಸಾರಕ್ಕೆ ಮತ್ತಷ್ಟು ಶ್ರಮಿಸುತ್ತಿದೆ. ಮತ್ತು ಭವಿಷ್ಯದಲ್ಲಿ ಹೆಚ್ಚು ಆಕರ್ಷಕ ಲೇಖನಗಳನ್ನು ಪ್ರಕಟಿಸುತ್ತ ಸುದ್ದಿ ಪ್ರಸರಣವನ್ನು ಹೆಚ್ಚಿಸಲಿದೆ ಓದುಗರು ಜಾಹಿರಾತು ನೀಡುವ ಮೂಲಕ ಬೆಳಗಾವಿ ವರದಿ ದಿನಪತ್ರಿಕೆಯನ್ನು ಪೋಷಿಸುವದರ ಜೊತೆಗೆ ಗಡಿಭಾಗದಲ್ಲಿ ಕನ್ನಡ ದಿನಪತ್ರಿಕೆ ಪ್ರಸಾರ ಸಂಖ್ಯೆ ಹೆಚ್ಚಿಸಲು ತಮ್ಮ ಸ್ನೇಹಿತರು ಮತ್ತು ಆಪ್ತರಿಗೆ ಪರಿಚಯಿಸಬೇಕು ಎಂದು ಮನವಿ ಮಾಡಿದರಲ್ಲದೆ ಇಲ್ಲಿಯವರೆಗಿನ ಪ್ರಯಾಣದಲ್ಲಿ ತಮ್ಮನ್ನು ಬೆಂಬಲಿಸಿದ ಓದುಗರಿಗೆ ಪತ್ರಿಕಾ ತಂಡ ಧನ್ಯವಾದಗಳನ್ನು ಸಲ್ಲಿಸಿತು.

Read More Articles