ಕುಂದಾನಗರಿಯಲ್ಲಿ ಕೋರೊನಾ ಅಟ್ಟಹಾಸ, ಇಂದು 60 ಜನ ಸೋಂಕಿತರು ಪತ್ತೆ ಯಾವ ತಾಲೂಕಿನಲ್ಲಿ ಎಷ್ಟು ?
- 15 Jan 2024 , 5:11 AM
- Belagavi
- 99
ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ದಿನದಿಂದ ದಿನಕ್ಕೆ ಕೋರೊನಾ ತನ್ನ ಕ್ರೌರ್ಯ ಪ್ರದರ್ಶಿಸಿಸುತ್ತಿದೆ. ಇಂದು ಮತ್ತೆ 60 ಜನರಿಗೆ ಕೊರೋನಾ ಸೋಂಕು ಪತ್ತೆಯಾಗುವ ಮೂಲಕ ಗಡಿನಾಡು ಬೆಳಗಾವಿ ಜಿಲ್ಲೆಯಲ್ಲಿ ಕೋರೊನಾ ಅಟ್ಟಹಾಸ ಮುಂದುವರಿದಿದೆ ಇದರಿಂದ ಜನರನ್ನು ಬೆಚ್ಚಿ ಬಿಳಿಸಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಸಾವಿರ ಗಡಿದಾಟಿದೆ 1073 ಕ್ಕೇ ಕೋರೊನಾ ಸೋಂಕಿತರ ಸಂಖ್ಯೆ ಏರಿಕೆ ಆಗಿದ್ದು. ಒಟ್ಟು 435 ಸೋಂಕಿತರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ನಿಂದ ಇಂದು ಇಬ್ಬರು ಜನರು ಬಲಿಯಾಗಿದ್ದು ಸೇರಿ ಕೊರೊನಾದಿಂದ ಜಿಲ್ಲೆಯಲ್ಲಿ 26 ಜನ ಕೊರೋನಾ ದಿಂದ ಮೃತಪಟ್ಟಿದ್ದಾರೆ. ಸೋಂಕಿತರಿಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಜಿಲ್ಲೆಯಲ್ಲಿ 618 ಆಕ್ಟಿವ್ ಪ್ರಕರಣ ಕಂಡುಬಂದಿವೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೋರೊನಾದಿಂದ ಕುಂದಾನಗರಿ ಜನರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.

ಬೆಳಗಾವಿಜಿಲ್ಲೆಯಕೊರೊನಾಗ್ರಾಫ್

ಬೆಳಗಾವಿ ತಾಲೂಕ 35
ಅಥಣಿ ತಾಲೂಕ 15
ಚಿಕ್ಕೋಡಿ ತಾಲೂಕ 9
ಹುಕ್ಕೇರಿ ತಾಲೂಕ 1










