ಹಿಡಕಲ್ ಹಾಗೂ ಹತ್ತರಗಿ ರಸ್ತೆಯ ಮಧ್ಯದಲ್ಲಿ ಬೃಹತ್ ಮೊಸಳೆ ಪತ್ತೆ
- 15 Jan 2024 , 1:38 AM
- Belagavi
- 101
ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಶಯ ಹಾಗೂ ಘಟಪ್ರಭಾ ನದಿ ನೀರಿನ ರಭಸಕ್ಕೆ ಮೊಸಳೆಗಳು ನೀರಿನಿಂದ ಹೊರ ಬರುತ್ತಿವೆ. ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಯದ ಪಕ್ಕದ ಹಿಡಕಲ್ ಹಾಗೂ ಹತ್ತರಗಿಗೆ ಸಂಪರ್ಕಿಸುವ ರಸ್ತೆಯ ಮೇಲೆ ಬೃಹತ್ ಮೊಸಳೆಯೊಂದು ನಿನ್ನೆ ತಡ ರಾತ್ರಿ ಹೊರಬಂದಿದೆ. ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿ ಮೊಸಳೆಯ ದೃಶ್ಯವನ್ನು ಸೆರೆಹಿಡಿದಿದ್ದು ಸಾಮಾಜಿಕ ಜಾಲತಾಣದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಫುಲ್ ವೈರಲ್ ಆಗಿದೆ. ಜನರು ಓಡಾಡುವ ರಸ್ತೆಯಲ್ಲಿ ಈ ಮೊಸಳೆ ಕಾಣಿಸಿಕೊಂಡಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ.












