ಕ.ರಾ.ರ.ಸಾ ಬಸ್ಸುಗಳಲ್ಲಿ ಮೊಬೈಲ್ ಬಳಕೆ ಬ್ಯಾನ್

ಬೆಂಗಳೂರು :ಕ.ರಾ.ರ.ಸಾ.ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಮರ್ಪಕ ಸುರಕ್ಷಿತ ಸಾರಿಗೆ ಸೌಲಭ್ಯವನ್ನು ಒದಗಿಸುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಮಾದರಿಯ ಸಾರಿಗೆ ಸೇವೆಗಳನ್ನು ರಾಜ್ಯದೊಳಗೆ ಮತ್ತು ನೆರೆ-ಹೊರೆಯ ಅಂತರ ರಾಜ್ಯ ಪ್ರದೇಶಗಳಲ್ಲಿ ಕಲ್ಪಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರು ಮೊಬೈಲ್ ದೂರವಾಣಿ ಮೇಲೆ ಬಹಳಷ್ಟು ಅವಲಂಬಿತರಾಗಿ ಮೊಬೈಲ್ ದೂರವಾಣಿ ಬಳಕೆ ದಿನೇ ದಿನೇ ಹೆಚ್ಚಾಗುತ್ತಿದೆ.

promotions

ಸಾರ್ವಜನಿಕರು ನಲ್ಲಿ ಮೊಬೈಲ್ ದೂರವಾಣಿಯ ಮೂಲಕ ಜೋರಾಗಿ ಹಾಡು/ಪದ್ಯ/ವಾರ್ತೆ/ಸಿನಿಮಾ ಇತ್ಯಾದಿ ಹಾಕುತ್ತಿದ್ದು ಇದರಿಂದ ಶಬ್ದ ಮಾಲಿನ್ಯ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುವ ಇತರೆ ಸಹ ಪ್ರಯಾಣಿಕರಿಗೆ ತೊಂದರೆವುಂಟಾಗುತ್ತಿರುವುದು ಕಂಡು ಬಂದಿದ್ದು ಈ ಸಂಬಂಧ ಸಾರ್ವಜನಿಕ ಸಾರಿಗೆಗಳಲ್ಲಿ ಶಬ್ದಮಾಲಿನ್ಯ ನಿಯಂತ್ರಿಸುವ ದಾಖಲಾಗಿರುತ್ತದೆ. ಕುರಿತು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯು ಮಾನ್ಯ ಉಚ್ಚನ್ಯಾಯಾಲಯದಲ್ಲಿ ದಾಖಲಾಗಿರುತ್ತದೆ ಎಂದು ನಿಗಮವು ತಿಳಿಸಿದೆ.

promotions

ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989, ನಿಯಮ 94(1)(V) ನ್ನು ಉಲ್ಲಂಘಿಸಿ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಕರು ಮೊಬೈಲ್ ದೂರವಾಣಿ ಮೂಲಕ ಜೋರಾಗಿ ಶಬ್ದ ಹೊರಸೂಸುವಂತೆ ಹಾಡು/ಪದ್ಯ/ವಾರ್ತೆ/ಸಿನಿಮಾ ಇತ್ಯಾದಿ ಹಾಕುವುದರಿಂದ ಶಬ್ಧಮಾಲಿನ್ಯ ಉಂಟಾಗುವುದರಿಂದ “ನಿಗಮದ ಬಸ್ಸುಗಳಲ್ಲಿ ದೂರವಾಣಿಯ ಮೂಲಕ ಜೋರಾಗಿ ಹಾಡು/ಪದ್ಯ/ವಾರ್ತೆ/ಸಿನಿಮಾ ಇತ್ಯಾದಿ ಹಾಕುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ”, ಈ ಸಂಬಂಧ ಕರ್ತವ್ಯ ನಿರತ ಚಾಲನಾ ಸಿಬ್ಬಂದಿಗಳು ಪ್ರಯಾಣಿಕರಿಗೆ ಸೂಕ್ತ ತಿಳುವಳಿಕೆ ನೀಡುವುದು ಹಾಗೂ ಹೆಚ್ಚಾಗಿ ಶಬ್ದ ಬರುವಂತೆ ಹಾಗೂ ಸಹ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವಂತೆ ಮೊಬೈಲ್ ದೂರವಾಣಿ ಬಳಸುತ್ತಿದ್ದಲ್ಲಿ ಆ ರೀತಿ ಬಳಸದಂತೆ ವಿನಂತಿಸುವುದು.

ಒಂದು ವೇಳೆ ಸದರಿ ಪ್ರಯಾಣಿಕ ವಿನಂತಿಗೆ ಮನ್ನಣೆ ನೀಡದೇ ಕರ್ನಾಟಕ ಮೋಟಾರು ವಾಹನಗಳ ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವುದು ಕಂಡುಬಂದಲ್ಲಿ ಸದರಿ ಪ್ರಯಾಣಿಕರನ್ನು ನಿಯಮಾನುಸಾರ ಚಾಲಕ ಅಥವಾ ನಿರ್ವಾಹಕ ಸ್ಥಳದಲ್ಲಿಯೇ ನಿಗಮದ ಬಸ್ಸಿನಿಂದ ಇಳಿಸುವುದು, ಸದರಿ ಪ್ರಯಾಣಿಕನು ಇಳಿಯುವವರೆಗೂವಾಹನವನ್ನು ನಿಲ್ಲಿಸುವುದು ಅಂತಹ ಪ್ರಯಾಣಿಕರಿಗೆ ಪ್ರಯಾಣದರವನ್ನು ಹಿಂತಿರುಗಿಸಲಾಗುವದಿಲ್ಲ ಎಂದು ಕ.ರಾ.ರ.ಸಾ.ನಿಗಮ ತಿಳಿಸಿದೆ.

Read More Articles