ಮರಡಿ ನಾಗಲಾಪುರ ಶಾಲೆಯಲ್ಲಿ ಮಕ್ಕಳ ದಿನಾಚಾರಣೆಯಂದು ಚಿಣ್ಣರ‌ ಚಿಲಿಪಿಲಿ

ಬೆಳಗಾವಿ: ಮರಡಿ ನಾಗಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಶಾಲಾ ಮಕ್ಕಳಿಗೆ ಕ್ರೀಡಾ ಸ್ಪರ್ಧೆಗಳು, ರಸ ಪ್ರಶ್ನೆಗಳು, ಹಾಗೂ ಮನರಂಜನೆ ಕಾರ್ಯಕ್ರಮಗಳನ್ನು ಶಿಕ್ಷಣ ಪ್ರೇಮಿ ಮಹಿಳಾ ಸಂಘದ ಮಹಿಳೆಯರಿಂದ ಆಯೋಜಿಸಲಾಗಿತ್ತು.

promotions

ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸುವಂತೆ ಉತ್ತೇಜಿಸುವುದು, ಸ್ಪರ್ಧಾ ಮನೋಭಾವನೆ ಬೆಳೆಸಿಕೊಳ್ಳವುದು, ಭವಿಷ್ಯದಲ್ಲಿ ಮಕ್ಕಳ ದೈಹಿಕ, ಶೈಕ್ಷಣಿಕ ಸುಧಾರಣೆ, ಜ್ಞಾನಾರ್ಜನೆ,ಹಾಗೂ ಕಲಿಕೆಯಲ್ಲಿ ಉತ್ತೇಜನ ನೀಡುವ ಸಲುವಾಗಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮ ಆಯೋಜಿಸಿದ ಶಿಕ್ಷಣ ಪ್ರೇಮಿ ಮಹಿಳೆಯರಾದ ಶ್ರೀಮತಿ ಸಿದ್ದವ್ವ ಉ ಗೊಡಚಿ, ಶ್ರೀಮತಿ ಕಾವೇರಿ ಬಿ ಚಂದರಗಿ, ಶ್ರೀಮತಿ ಸುಮಿತ್ರಾ ಎನ್ ಹಂಚಿನಮನಿ ಇವರ ನೇತೃತ್ವದಲ್ಲಿ ಈ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿತ್ತು.

promotions

ಈ ಕಾರ್ಯಕ್ರಮಕ್ಕೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಧಾನ ಗುರುಗಳು, ಎಲ್ಲ ಶಿಕ್ಷಕರು ಈ ಸ್ಪರ್ಧಾ ಕಾರ್ಯಕ್ರಮ ವನ್ನು ಯಶಸ್ವಿ ಯಾಗಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು, ಪಂಚಾಯತಿಯ ಸದಸ್ಯರು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರು, ಯುವಕರು, ಶಿಕ್ಷಣ ಪ್ರೇಮಿಗಳು, ಮುದ್ದು ವಿದ್ಯಾರ್ಥಿ, ವಿದ್ಯಾರ್ಥಿ ನಿಯರು, ಮುಂತಾದವರು ಪಾಲ್ಗೊಂಡಿದ್ದರು. ಈ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನಗಳನ್ನು ವಿತರಿಸಲಾಯಿತು.

Read More Articles