ಮಾಜಿ ಕ್ರಿಕೆಟೀಗ್ ಗೌತಮ್ ಗಂಭೀರಗೆ ಐಸಿಸ್ ಉಗ್ರರಿಂದ ಜೀವ ಭೇದರಿಕೆ

  • 14 Jan 2024 , 9:39 PM
  • Delhi
  • 102

ದೆಹಲಿ : ಬಿಜೆಪಿ ಸಂಸದ ಹಾಗು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ತನಗು ಹಾಗು ತನ್ನ ಕುಟುಂಬಕ್ಕೆ ಐಸಿಸ್ ಭಯೋತ್ಪಾದಕರ ಗುಂಪು ಜೀವ ಬೆದರಿಕೆ ಹಾಕಿದೆ ಎಂದು ದೆಹಲಿ ಪೋಲಿಸರಲ್ಲಿ ದೂರು ದಾಖಲಿಸಿದ್ದಾರೆ.

promotions

ನಿನ್ನೆ ರಾತ್ರಿ ದೂರು ದಾಖಲಿಸಿದ ನಂತರ ರಾಷ್ಟ್ರ ರಾಜಧಾನಿಯಲ್ಲಿರುವ ಅವರ ಮನೆಯ ಹೊರಗೆ ಭದ್ರತೆಯನ್ನು ಬಿಗಿಗೊಳಿಸಿ ತನಿಖೆಗೆ ಆದೇಶಿಸಲಾಗಿದೆ.

promotions

ಮಂಗಳವಾರ ರಾತ್ರಿ 9.32 ಕ್ಕೆ ಗಂಭೀರ್ ಅವರ ಅಧಿಕೃತ ಇಮೇಲ್ ಐಡಿಗೆ ಐಸಿಸ್ ಕಾಶ್ಮೀರ ನಿಂದ ಕೊಲೆ ಬೆದರಿಕೆ ಬಂದಿದೆ ಎಂದು ಉಪ ಪೊಲೀಸ್ ಆಯುಕ್ತರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಮೇಲ್‌ನಲ್ಲಿ “ನಾವು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಕೊಲ್ಲಲಿದ್ದೇವೆ ಎಂದು ಭಯೋತ್ಪಾದಕರು ಭೇದರಿಕೆ ಹಾಕಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿ ಎಫ್‌ಐಆರ್ ದಾಖಲಿಸಿ ಅಗತ್ಯ ಭದ್ರತಾ ವ್ಯವಸ್ಥೆ ಮಾಡುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

Read More Articles