ಹುಕ್ಕೇರಿ ತಾಲೂಕಿನಲ್ಲಿ ಇಂದು ಒಂದೇ ದಿನ 25 ಜನರಿಗೆ ಕೊರೊನಾ ಸೋಂಕು ದೃಢ
- 30 Dec 2023 , 6:01 PM
- Belagavi
- 108
ಹುಕ್ಕೇರಿ: ತಾಲೂಕಿನಲ್ಲಿ ಇವತ್ತು ಒಂದೆ ದಿನ 25 ಜನರಿಗೆ ಕೊರೊನಾ ಪಾಸಿಟಿವ್ ಸೋಂಕು ತಗುಲಿರುವದು ದೃಢಪಟ್ಟಿದೆ. ತಾಲೂಕಿನಲ್ಲಿ ಇದೇ ಮೊದಲ ಬಾರಿಗೆ ಒಂದೆ ದಿನ ಅತಿ ಹೆಚ್ಚು ಕೋವಿಡ್ ಕೇಸ್ ಪತ್ತೆಯಾಗಿದ್ದರೆ ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದರೆ .

ಹುಕ್ಕೇರಿ ತಾಲೂಕಿನಲ್ಲಿ ಇಂದು ಹುಕ್ಕೇರಿ ನಗರದಲ್ಲಿ 1, ತಾಲೂಕಿನ ಶಿರಗಾಂವ ಗ್ರಾಮದಲ್ಲಿ 10, ಅವರಗೋಳ ಗ್ರಾಮದಲ್ಲಿ 5, ಸುಲ್ತಾನಪೂರ ಗ್ರಾಮದಲ್ಲಿ 5,ನೋಗನಿಹಾಳ, ಬೆಣಿವಾಡ , ಮದಿಹಳ್ಳಿ ಹಾಗೂ ಬೆಲ್ಲದ ಬಾಗೆವಾಡಿ ಗ್ರಾಮಗಳಲ್ಲಿ ತಲಾ ಒಂದು ಸೋಂಕಿತರ ಮಾದರಿ ಕೊರೊನಾ ಪಾಸೀಟಿವ್ ಲಕ್ಷಣಗಳು ಕಂಡುಬಂದಿದೆ.

ಪ್ರಮುಖವಾಗಿ ಕೊರೊನಾ ತಾಲೂಕಿನ ಹಳ್ಳಿಗಳಲ್ಲಿ ಇಂದು ಪಾಸಿಟಿವ್ ಬಂದಿದ್ದು ಆದರೆ ಸಮುದಾಯದ ಹಂತ ತಲುಪಲು ಕೊರೋನಾ ಸಿದ್ದವಾದಂತಾಗಿದೆ. ಆರೋಗ್ಯ ಇಲಾಖೆ ಹಾಗೂ ಅಧಿಕಾರಿಗಳು ಸೋಂಕೀತರ ಜೋತೆಗೆ ಸಂಪರ್ಕದ ವ್ಯಕ್ತಿಗಳನ್ನು ಪತ್ತೆ ಹಚ್ಚಲಿದ್ದಾರೆ ಹಾಗೂ ಸೋಂಕಿತರ ಇದ್ದ ಮನೆ, ಎರಿಯಾವನ್ನು 200 ಮೀಟರ್ ಸುತ್ತಲು ಸಿಲ್ ಡೌನ ಮಾಡುವ ಕಾರ್ಯ ಮುಂದುವರಿದಿದೆ.










