ಮಾಸ್ಕ್ ಧರಿಸದವರಿಗೆ 100 ರೂಪಾಯಿ ದಂಡ ಹಾಕಿದ ಚಿಕ್ಕೋಡಿ ಪುರಸಭೆ

<p><strong>ಬೆಳಗಾವಿ</strong>: ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಪುರಸಭೆಯ ವ್ಯಾಪ್ತಿಯಲ್ಲಿ ಮುಖಗವಚ (ಮಾಸ್ಕ) ಹಾಕದೆ ಧರಿಸದೆ ಓಡಾಡುವ ಜನರಿಗೆ ಪುರಸಭೆ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಿಂದ ತಲಾ 100 ರೂಪಾಯಿಗಳು ದಂಡವನ್ನು ವಿಧಿಸುವ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಕೋರೊನಾ ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜನರು ಆರೋಗ್ಯದ ಹಿತ ದೃಷ್ಟಿಯಿಂದ ಮಾಸ್ಕ್ ಧರಿಸಿ ಓಡಾಡಬೇಕು. ಒಂದು ವೇಳೆ ಮಾಸ್ಕ್ ಧರಿಸದೆ ಓಡಾಡುವ ಜನರಿಗೆ ತಲಾ ನೂರು ರೂಪಾಯಿ ದಂಡವನ್ನು ಹಾಕುತ್ತೇವೆ. ದಂಡದ ಭಯದಿಂದವಾದರು ಜನರು ಮಾಸ್ಕ್ ಧರಿಸಿ ಹೊರಬರುವುದನ್ನು ರೂಡಿಸಿಕೊಳ್ಳುವುದು ಸಾಧ್ಯ ಎಂದು ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿ ಸುಂದರ ರೋಗಿ ತಿಳಿಸಿದ್ದಾರೆ.
</p>

promotions

Read More Articles