ಅನುದಾನಿತ ಶಾಲೆಗಳಲ್ಲಿ ಖಾಲಿ ಹುದ್ದೆಗಳು ಭರ್ತಿ ಮಾಡುವ ಸಂಬಂಧ ಪತ್ರಿಕಾ ಜಾಹೀರಾತು ನೀಡಿದ ಅಥವಾ ನೀಡುವ ಕುರಿತು ಮನವಿ
- 15 Jan 2024 , 2:44 AM
- Belagavi
- 1193
ಬೆಳಗಾವಿ :ಸರ್ಕಾರವು ಈಗಾಗಲೇ 2015ರ ವರೆಗೆ ಅನುದಾನಿತ ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳನ್ನು ತುಂಬಿಕೊಳ್ಳಲು ಆದೇಶಿಸಿದೆ. ಅದರಂತೆ ಅನೇಕ ಖಾಸಗಿ ಅನುದಾನಿತ ಶಿಕ್ಷಣ ಸಂಸ್ಥೆಗಳು ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಹುದ್ದೆ ಭರ್ತಿ ಮಾಡಲು ಶಿಕ್ಷಣ ಇಲಾಖೆ ಸಂಬಂಧಿಸಿದ ಆಯುಕ್ತರಿಂದ ಅನುಮತಿಯನ್ನು ಪಡೆದಿದ್ದು, ಅನುಮತಿಯಲ್ಲಿ ಸೂಚಿಸಿದ ನೇಮಕಾತಿ ಬಿಂದುವಿನಂತೆ ಪತ್ರಿಕೆಯಲ್ಲಿ ಜಾಹೀರಾತು ನೀಡಿದ್ದು ಪತ್ರಿಕೆಯವರು ತಮ್ಮ ಪತ್ರಿಕೆಯಲ್ಲಿ ಜಾಹೀರಾತು ಪ್ರಕಟಿಸಿದ್ದಾರೆ.

ಅ ಪ್ರಕಟಣೆ ಯಂತೆ ಅರ್ಜಿ ಸಲ್ಲಿಸಿದ್ದು ಸಂಸ್ಥೆಗಳ ಆಡಳಿತ ಮಂಡಳಿಯವರು ಸಂದರ್ಶನ ಕರೆದು ಉಪನಿರ್ದೇಶಕರ ಕಚೇರಿ ವಿಷಯ ಪರಿವೀಕ್ಷಕರು ಎದುರು ನೇಮಕಾತಿ ಮಾಡಿಕೊಂಡಿದ್ದಾರೆ ನೇಮಕಾತಿ ನಂತರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಕ್ಕೆ ಚೆಕ್ ಲಿಸ್ಟ್ ನಂತೆ ಉಪನಿರ್ದೇಶಕರು,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ತದನಂತರ ಅಯಾ ಆಯುಕ್ತರ ಕಾರ್ಯಾಲಯದಲ್ಲಿಯೂ ಸಹಾಯಕರಿಂದ ಹಿಡಿದು ಎಲ್ಲಾ ನಿರ್ದೇಶಕರವರೆಗೂ ಕಡತಗಳಿಗೆ ಅನುಮತಿ ನೀಡಿದ್ದಾರೆ. ಆದರೆ ಅಂತಿಮವಾಗಿ ಆಯುಕ್ತರು ಸಹಿ ಮಾಡುವಾಗ ಜಾಹೀರಾತಿನ ಗೊಂದಲ ಸೃಷ್ಟಿಸಿದ್ದಾರೆ.

ಈ ಗೊಂದಲಗಳಿಗೆ ಸರ್ಕಾರದ ಅಧೀನ ಕಾರ್ಯದರ್ಶಿಳು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಇಲಾಖೆ ಬಹುಮಹಡಿ ಕಟ್ಟಡ 30/10/2021 ರಂದು ಕಡತಗಳಿಗೆ ಅನುಮೋದಿಸಲು ತುರ್ತು ಆದೇಶ ನೀಡಿದ್ದರೂ ಕೂಡ ಅದಕ್ಕೂ ಮನ್ನಣೆ ನೀಡುತ್ತಿಲ್ಲ ಕಳೆದ 2 ವರ್ಷಗಳಿಂದ ಈಗಾಗಲೇ ಕೆಲಸ ಮಾಡುತ್ತಿರುವ ಇವರಿಗೆ ಮಾನಸಿಕ ಹಿಂಸೆಯಾಗಿ ಇಡೀ ಕುಟುಂಬವೇ ಚಿಂತಾತೀತರಾಗಿದ್ದಾರೆ . ಶಿಕ್ಷಕರ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ತಾವು ನ್ಯಾಯ ದೊರಕಿಸಿ ಕೊಡಬೇಕೆಂದು ವಿನಂತಿಸಿಕೊಂಡಿದ್ದಾರೆ.










