ಮಹಿಳೆಯರ ವಿವಾಹ ವಯಸ್ಸನ್ನು 18 ರಿಂದ 21 ಕ್ಕೆ ಹೆಚ್ಚಿಸುವ ಪ್ರಸ್ತಾವನೆಗೆ ಸಂಪುಟದಲ್ಲಿ ಅನುಮೋದನೆ

  • 14 Jan 2024 , 9:33 PM
  • Delhi
  • 98

ದೆಹಲಿ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ತೆಗೆದು ಕೊಂಡಿದೆ.ಇನ್ನು ಮುಂದೆ ಮದುವೆ ಯಾಗಲು ಅಥವಾ ಮದುವೆ ಮಾಡಲು ಹೆಣ್ಣಿನ ವಯಸ್ಸು 21 ವರ್ಷಕ್ಕೆ ಏರಿಸಲಾಗಿದೆ.

promotions

ಸಮಾನತೆ ಮತ್ತು ಶಿಕ್ಷಣದಲ್ಲಿ ಸಮನಾದ ಗೌರವ್ ಮತ್ತು ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಇದು ಸಹಾಯವಾಗಿದೆ.

promotions

ಪ್ರಸ್ತುತ, ಪುರುಷರಿಗೆ ಮದುವೆಯ ಕಾನೂನುಬದ್ಧ ಕನಿಷ್ಠ ವಯಸ್ಸು 21 ವರ್ಷಗಳು ಮತ್ತು ಮಹಿಳೆಯರಿಗೆ 18 ವರ್ಷಗಳು. ಜಯಾ ಜೇಟ್ಲಿ ನೇತೃತ್ವದ NITI ಆಯೋಗ್ ಕಾರ್ಯಪಡೆಯ ಶಿಫಾರಸಿನ ಮೇರೆಗೆ ಈ ಪ್ರಸ್ತಾಪವನ್ನು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಸ್ವಾತಂತ್ರ್ಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಯನ್ನು ಘೋಷಿಸಿದ ಒಂದು ವರ್ಷದ ನಂತರ ಅನುಮತಿ ಸಿಕ್ಕಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಮದುವೆಯ ವಯಸ್ಸು ದೇಶದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಏಕರೂಪವಾಗಿರಬೇಕು ಎಂದು 2018ರಲ್ಲಿ ಪ್ರಸ್ತಾವಿಸಿತ್ತು.

ಈ ಕ್ರಮವನ್ನು ಸ್ವಾಗತಿಸಿರುವ ರಾಜ್ಯಸಭಾ ಸಂಸದೆ ಜಯಾ ಬಚ್ಚನ್, "ಇದೊಂದು ಒಳ್ಳೆಯ ನಿರ್ಧಾರ. ಇದರಿಂದ ಹೆಣ್ಣುಮಕ್ಕಳಿಗೆ ಹೆಚ್ಚು ಓದಲು ಅವಕಾಶ ಸಿಗುತ್ತದೆ. ಅವರು ತಮ್ಮ ಸ್ವಾತಂತ್ರ್ಯವನ್ನು ಆನಂದಿಸಲು ಸಾಧ್ಯವಾಗುತ್ತದೆ. ಅವರಿಗೆ ಉತ್ತಮ ಉದ್ಯೋಗಾವಕಾಶಗಳೂ ಸಿಗುತ್ತವೆ" ಎಂದು ತಿಳಿಸಿದ್ದಾರೆ.

Read More Articles