ಕೊರೊನಾ ಭಯದ ನಡುವೆ ಸಡಗರದಿಂದ ನಾಗ ಪಂಚಮಿ ಹಬ್ಬ ಆಚರಣೆ : ಮಾಸ್ಕ್ ಧರಿಸಿ ನಾಗಪ್ಪನಿಗೆ ಹಾಲೇರೆದ ಮಹಿಳೆಯರು

  • 15 Jan 2024 , 1:17 AM
  • Haveri
  • 112

ರಾಣೇಬೆನ್ನೂರ : ಕೊರೊನಾ ಭಯದ ನಡುವೆಯೇ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಜನರು ಶುಕ್ರವಾರ ನಾಗರ ಪಂಚಮಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು. ಹಬ್ಬದ ಪ್ರಯುಕ್ತ ಗೃಹಿಣಿಯರು ಬೆಳಗ್ಗೆಯಿಂದಲೇ ಮನೆಯ ಎದುರಿನಲ್ಲಿ ಚಿತ್ತಾಕರ್ಷಕ ರಂಗೋಲಿ ಬಿಡಿಸಿ ತಳಿರು ತೋರಣಗಳಿಂದ ಮನೆಗಳನ್ನು ಅಲಂಕರಿಸಿರುವುದು ಕಂಡುಬಂದಿತು. ಆದರೆ ಈ ಬಾರಿ ಕೊರೊನಾ ಕಾರಣದಿಂದಾಗಿ ಹೊಸದಾಗಿ ಮದುವೆಯಾದ ಹೆಣ್ಣುಮಕ್ಕಳು ತವರು ಮನೆಯಲ್ಲಿ ಹಬ್ಬವನ್ನು ಅಚರಿಸುವ ಅವಕಾಶದಿಂದ ವಂಚಿತರಾದರು. ಇದಲ್ಲದೆ ಸುರಕ್ಷತೆ ದೃಷ್ಟಿಯಿಂದ ಹಲವಾರು ಮಹಿಳೆಯರು ಮಾಸ್ಕ್ ಧರಿಸಿಕೊಂಡು ಬಂದು ನಾಗಪ್ಪನಿಗೆ ಪೂಜೆ ಸಲ್ಲಿಸಿ ಹಾಲೆರೆದರು. ಇನ್ನೂ ಗ್ರಾಮೀಣ ಭಾಗದಲ್ಲಿಯೂ ಕೂಡ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವುದು ಕಂಡು ಬಂದಿತ್ತು. ಹಬ್ಬಕ್ಕಾಗಿ ವಿಶೇಷವಾಗಿ ತಯಾರಿಸಿದ ಶೇಂಗಾ, ದಾಣಿ, ಗುಳಿಗಿ, ಎಳ್ಳು, ಕಡ್ಲಿ, ಅಳ್ಳಿಟ್ಟು ಉಂಡಿಗಳನ್ನು ದೇವರಿಗೆ ನೈವೆದ್ಯ ಮಾಡಿ ಸೇವಿಸಿ ನೆರೆಹೊರೆಯವರಿಗೆ ಹಂಚಿ ಸಂಭ್ರಮಿಸಿದರು. ಇತ್ತ ಹಬ್ಬದ ನಿಮಿತ್ತ ಗ್ರಾಮೀಣ ಭಾಗದ ಜನರು ನಗರಕ್ಕೆ ಹೆಚ್ಚಾಗಿ ಬರದೇ ಇದ್ದಿದ್ದರಿಂದ ಬಸ್ ನಿಲ್ದಾಣ, ಮಾರುಕಟ್ಟೆ ಹಾಗೂ ಎಮ್.ಜಿ.ರಸ್ತೆ ಬಿಕೋ ಎನ್ನುತ್ತಿತ್ತು.

promotions

promotions

Read More Articles