ಡಿ ಗ್ರೂಪ್ ಹಾಗೂ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಕನಿಷ್ಟ ವೇತನ ನೀಡುವಂತೆ ಸರ್ಕಾರಕ್ಕೆ ಮನವಿ

ಬೆಳಗಾವಿ :ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅರೆಕಾಲಿಕ, ಹೊರಗುತ್ತಿಗೆ, ಡಿ ಗ್ರೂಪ್ ಹಾಗೂ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಕನಿಷ್ಟ ವೇತನ, ಪಿಎಫ್, ಇಎಸ್ ಐ ಒದಗಿಸಲು ಕೋರಿ ರಾಜ್ಯ ಮಟ್ಟದ ಪ್ರತಿಭಟನಾ ಧರಣಿ ಮಾಡಿದ್ದಾರೆ.

promotions

ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ರಾಜ್ಯದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳಲ್ಲಿ ಸಿಡಿಸಿ, ಗುತ್ತಿಗೆ, ಹೊರಗುತ್ತಿಗೆ ಮತ್ತು ಆನ್ ಹೆಸರಿನಲ್ಲಿ 'ಡಿ' ಗ್ರೂಪ್ ಹಾಗೂ ಡೇಟಾ ಎಂಟ್ರಿ ಆಪರೇಟರ್‌ಗಳಾಗಿ ಕೆಲಸ ಮಾಡುತ್ತಿರುವ ಕಾರ್ಮಿಕರು ಶಾಸನಬದ್ಧವಾಗಿ ಸಿಗಬೇಕಾದ ಕನಿಷ್ಠ ವೇತನವೂ ಇಲ್ಲದೇ ಕಳೆದ ಹಲವಾರು ವರ್ಷಗಳಿಂದಲೂ ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಸೇವೆ ಸಲ್ಲಿಸುತ್ತಿದ್ದಾರೆ ಇವರು ಸ್ವಚ್ಛತಾ ಕಾರ್ಯದಿಂದ ಆರಂಭಗೊಂಡು ಎಲ್ಲಾ ಕೆಲಸವನ್ನು ನಿರ್ವಹಿಸಿಕೊಂಡು ಬರುತ್ತಿದ್ದಾರೆ.

promotions

ಕಾಲೇಜಿನ ಪ್ರಯೋಗಾಲಯ, ಗಂಥಾಲಯಗಳಲ್ಲಿ ಸಹ ಸಹಾಯಕರಾಗಿ ಕೆಲಸ ಮಾಡಿ ಅನಾಭವ ಪಡೆದಿದ್ದಾರೆ. ಇಲ್ಲಿಯವರೆಗೆ ಕಾಲೇಜಿನ ಭೋದಕೇತರ ಎಲ್ಲಾ ಕೆಲಸಗಳನ್ನು ಇವರೇ ನಿರ್ವಹಿಸಿಕೊಂಡು ಬಂದಿರುತ್ತಾರೆ. ಈ ಸೇವೆಯಲ್ಲಿ ಕಾರ್ಯನಿರತರಾಗಿರುವ ಕಾರ್ಮಿಕರಲ್ಲಿ ಹೆಚ್ಚಿನವರು ಶೋಷಿತ ಸಮುದಾಯದ ಮಹಿಳೆಯರೇ ಆಗಿದ್ದು, ತಮ್ಮ ಹಾಗೂ ಕುಟುಂಬ ನಿರ್ವಹಣೆಯ ಹೊಣೆ ಹೊತ್ತಿರುವ ಇವರು ಹಲವಾರು ವರ್ಷಗಳಿಂದ ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ.

ಆದರೆ ಇಲ್ಲಿಯವರೆಗೆ ಅವರಿಗೆ ಕನಿಷ್ಟ ವೇತನ, ಪಿಎಫ್, ಇಎಸ್‌ಐ ಹಾಗೂ ಇನ್ನಿತರ ಯಾವುದೇ ಸೌಲಭ್ಯಗಳನ್ನು ನೀಡದೇ ಬಂದಿರುವುದು ವಿಷಾದನೀಯ. ಇಂದಿಲ್ಲ. ನಾಳೆ ತಮ್ಮ ಕೆಲಸವು ಖಾಯಂ ಆಗಬಹುದೆಂಬ ನಿರೀಕ್ಷೆಯಲ್ಲಿ ಅತ್ಯಂತ ಕಡಿಮೆ ವೇತನಕ್ಕೆ ದುಡಿಯುತ್ತಲೇ ಇದ್ದಾರೆ. ಇದೀಗ ತಮ್ಮ ಇಲಾಖಾ ವ್ಯಾಪ್ತಿಯ ಕಾಲೇಜುಗಳ ಡಿ ಗ್ರೂಪ್ ಹಾಗೂ ಡೇಟಾ ಎಂಟಿ ಆಪರೇಟರ್‌ಗಳಿಗೆ ಇಷ್ಟು ವರ್ಷ ಅತ್ಯಂತ ಕಡಿಮೆ ವೇತನಕ್ಕೆ ಸೇವೆ ಸಲ್ಲಿಸುತ್ತಾ ಬಂದಿರುವ ಇವರಿಗೆ ಕನಿಷ್ಟ ವೇತನ, ಪಿಎಫ್, ಇಎಸ್‌ಐ ಒದಗಿಸಬೇಕಾದದ್ದು ಸಾಮಾಜಿಕ ನ್ಯಾಯವಾಗಿದೆ.

ಅಲ್ಲದೇ ಅವರು ಅನುಭವ ನೌಕರರಾಗಿದ್ದಾರೆ. ಇವರ ಸೇವೆ ಕೂಡಾ ಇಲಾಖೆಗೆ ಬಹಳ ಅಗತ್ಯವಾಗಿದೆ, ಆದ್ದರಿಂದ ಇದೀಗ ಎಲ್ಲಾ ಸಿಡಿಸಿ, ಆರಕಾಲಿಕ, ಆನ್ಸಿಲ್ ಹಾಗೂ ಡೇಟಾ ಎಂಟ್ರಿ ಆಪರೇಟರ್‌ಗಳಿಗೆ ಕನಿಷ್ಠ ವೇತನವನ್ನು ಮತ್ತು ಶಾಸನಬದ್ಧವಾಗಿ ಕಾರ್ಮಿಕರಿಗೆ ನೀಡಬೇಕಾದ ಎಲ್ಲಾ ಕಷ್ಟ ಸೌಲಭ್ಯಗಳನ್ನು ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಕಾಲೇಜುಗಳ ಕಾರ್ಮಿಕರ ಸಂಘ ದ ಮೂಲಕ ಹಮ್ಮಿಕೊಳ್ಳಲಾದ ಪ್ರತಿಭಟನಾ ಧರಣಿಯಲ್ಲಿ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ ನೂರಾರು ಕಾರ್ಮಿಕರು ಭಾಗವಹಿಸಿ, ಸರಕಾರದ ವಿರುದ್ಧ ಘೋಣೆ ಕೂಗಿ ತಮ್ಮ ಬೇಡಿಕೆಗಳನ್ನು ಇಟ್ಟಿದ್ದಾರೆ.

Read More Articles