ನಗರದ ಪಾರ್ಕಿಂಗ್ ಸಮಸ್ಯೆಗೆ ಬೇಸ್ ಮೆಂಟ್ ತೆರವುಗೊಳಿಸದಿರುವುದೇ ಮುಖ್ಯ ಕಾರಣ...!

ಇದು ಲೋಕಲ್ ವ್ಯೂವ್ ಅಭಿಯಾನ
ಬೇಸ್ ಮೆಂಟ್ ನಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ನಿಮ್ಮ ಅಭಿಪ್ರಾಯವೂ ತಿಳಿಸಿ
ಕ್ಲಿಕ್ ಮಾಡಿ
150 ಪದ ಮೀರಿರಬಾರದು, ನಿಮ್ಮ ಫೋಟೋ ಸಮೇತ ನಮ್ಮ ವೆಬ್ ಸೈಟ್‌ನಲ್ಲಿ ಪ್ರಕಟಿಸಲಾಗುವುದು.

promotions

ಬೆಳಗಾವಿ: ಸ್ಮಾರ್ಟ ಸಿಟಿಯಾಗುವತ್ತ ದಾಪುಗಾಲು ಹಾಕುತ್ತಿರುವ ಬೆಳಗಾವಿ ನಗರದಲ್ಲಿ ಬೇಸ್‌ಮೆಂಟ್ (ನೆಲಮಹಡಿ) ತೆರವು ಕಾರ್ಯಾಚರಣೆ ಎನ್ನುವುದು ದಶಕದಿಂದ ಮರೀಚಿಕೆಯಾಗಿದೆ. ಜನಪ್ರತಿನಿಧಿಗಳ ತೀವ್ರ ಹಸ್ತಕ್ಷೇಪದಿಂದ ದಶಕಗಳಿಂದ ಸಂಚಾರದ ದಟ್ಟಣೆಯಲ್ಲಿ ಜನರು ನಲುಗಿ ಹೋಗಿದ್ದಾರೆ.

promotions

localview

ಇಲ್ಲಿನ ಮಾರುಕಟ್ಟೆ ಪ್ರದೇಶವಂತೂ ವಾಹನ ನಿಲುಗಡೆಯಿಂದ ಕಿಕ್ಕಿರುದು ತುಂಬುತ್ತಿದೆ. ಇದಕ್ಕೆಲ್ಲ ಕಾರಣ ಬೇಸ್‌ಮೆಂಟ್ ಕಾರ್ಯಾಚರಣೆ ಆಗದಿರುವುದು. ಬಹುದೊಡ್ಡ ಕಟ್ಟಡ ಹಾಗೂ ಮಳಿಗೆಗಳಲ್ಲಿ ಅಂಗಡಿ-ಮುಗ್ಗಟ್ಟು ಮೇಲೆದಿದ್ದೆ. ಮಹಾನಗರ ಪಾಲಿಕೆಯೇ ಇವುಗಳಿಗೆ ಅನುಮತಿ ನೀಡಿದ್ದರೆ ಇಂಥ ಅಕ್ರಮಕ್ಕೆ ಕಡಿವಾಣ ಹಾಕಬಹುದಾಗಿತ್ತು. ಆದರೆ ಅಧಿಕಾರಿಗಳ ಕೃಪಾಕಟಾಕ್ಷದಿಂದ ಬೇಸ್‌ಮೆಂಟ್ ವ್ಯಾಪಾರಿಗಳು ನಿರಾತಂಕವಾಗಿ ವ್ಯಾಪಾರ ನಡೆಸುತ್ತಿದ್ದಾರೆ. ಬೆಳಗಾವಿ ನಗರದ ಮಾರುಕಟ್ಟೆ ಪ್ರದೇಶಗಳ ಬಹುತೇಕ ಬೇಸ್‌ಮೆಂಟ್‌ಗಳೆಲ್ಲ ವ್ಯಾಪಾರ ವಹಿವಾಟಿನಿಂದ ತುಂಬಿ ತುಳುಕುತ್ತಿವೆ. ಆದರೆ ವಾಹನ ನಿಲುಗಡೆ ಮಾತ್ರ ಅವಕಾಶವಿಲ್ಲದಿರುವುದು ಸಂಚಾರ ದಟ್ಟಣೆ ಹೆಚ್ಚಾಗಲು ಮೂಲ ಕಾರಣವಾಗಿವೆ. ಬೇಸ್‌ಮೆಂಟ್ ವ್ಯವಹಾರ ಒಂದು ದೊಡ್ಡ ಲಾಬಿಯಾಗಿದ್ದು, ಇದನ್ನು ತೆರವುಗೊಳಿಸುವುದು ಅಸಾಧ್ಯ ಎನ್ನುವ ಮಟ್ಟಿಗೆ ಇಲ್ಲೊಂದು ವ್ಯೂಹ ರಚನೆಯಾಗಿದೆ.

localview

ಈ ವ್ಯೂಹ ಅಧಿಕಾರಿಗಳನ್ನು ಖರೀದಿಸುತ್ತಿದೆ. ಏಕೆಂದರೆ ಬೇಸ್‌ಮೆಂಟ್ ವ್ಯವಹಾರ ಲಾಭದಾಯಕವಾಗಿ ಕಂಗೊಳಿಸುತ್ತಿದೆ. ಬೇಸ್‌ಮೆಂಟ್ ಕಾರ್ಯಾಚರಣೆಯ ವಿಚಾರ ಬಂದಾಗ ಬೆಳಗಾವಿ ನಗರ ಅಬ್ಬರಿಸುತ್ತಿದೆ. ಆದರೆ ಇದು ಹೆಸರಿಗೆ ಮಾತ್ರ. ಯಾವುದೇ ತೆರವು ಕಾರ್ಯಾಚರಣೆಯಿಲ್ಲ. ವ್ಯವಹಾರ ನಿರಾಂತಕ. ಸಂಚಾರ ವಾಹನ ನಿಲುಗಡೆ ನಿರಂತರ.

localview

ನಗರಕ್ಕೆ ಸಂಚಕಾರವಾದ ಈ ಬೇಸ್‌ಮೆಂಟ್ ವ್ಯವಹಾರ ಇನ್ನಾದರೂ ತಪ್ಪುವುದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ನಗರ ಮಾರುಕಟ್ಟೆ ಪ್ರದೇಶಗಳ ಬೇಸ್‌ಮೆಂಟ್‌ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ ಬಹುತೇಕ ವಾಹನ ನಿಲುಗಡೆ ಸಂಚಾರದ ಸಮಸ್ಯೆ ಇರುವುದಿಲ್ಲ. ಜತೆಗೆ ಸಂಚಾರದ ಸಮಸ್ಯೆಯ ಸುಗಮಗೊಳ್ಳುತ್ತದೆ ಎನ್ನುವ ಅಭಿಪ್ರಾಯ ಸಾರ್ವಜನಿಕರದ್ದಾಗಿದೆ. ಇನ್ನೂ ಕೆಲ ಪ್ರಭಾವಿಗಳು ಬೇಸ್‌ಮೆಂಟ್ ತೆರವುಗೊಳಿಸುವ ಯೋಚನೆಯಲಿಲ್ಲ.

localview

ಇವರಿಗೆ ಬೇಸ್‌ಮೆಂಟ್ ಕಾರ್ಯಾಚರಣೆ ಆಗದಿರುವುದು ಸದ್ಯ ಅನಿವಾರ್ಯವಾಗಿದೆ. ಆದರೆ ತೆರವುಗೊಳಿಸಬೇಕೆನ್ನುವ ಇಚ್ಚೆ ಪಾಲಿಕೆಗೆ ಇದ್ದರೂ ಜನಪ್ರತಿನಿದಿಗಳು ಇದಕ್ಕೆ ಅಡ್ಡಗಾಲು ಹಾಕುತ್ತಿರುವಾಗ ಬೇಸ್‌ಮೆಂಟ್ ಕಾರ್ಯಾಚರಣೆ ಜಿಲ್ಲಾಡಳಿತಕ್ಕೆ ಒಪ್ಪಿಸಿದರೆ ಅದು ಸಹಿತ ಅಸಹಾಯಕ ಸ್ಥಿತಿ ತಲುಪಿದರು ಅಚ್ಚರಿಪಡಬೇಕಿಲ್ಲ.

Read More Articles