ಕೊರೊನಾ ವಾರಿಯರ್ಸ್‌‌ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ

  • 14 Jan 2024 , 9:54 PM
  • Haveri
  • 111

ಹಾವೇರಿ: ಜಿಲ್ಲೆಯ ಶಿಗ್ಗಾಂವ ತಾಲೂಕಿನ ಬಂಕಾಪೂರ ಪಟ್ಟಣದ ನ್ಯಾಯ ಬೆಲೆ ಆವರಣದಲ್ಲಿ ಇಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಕೊರೊನಾ ಸೋಂಕಿನ ವಿರುದ್ಧ ಹೋರಾಟದಲ್ಲಿ ತೊಡಗಿರುವ ಕೊರೊನಾ ವಾರಿಯರ್ಸ್‌‌ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಿ ಸಹಾಯ ಧನ ಹಾಗೂ ಚೆಕ್‌ ವಿತರಿಸಲಾಯಿತು. ಈ ಸಂಧರ್ಭದಲ್ಲಿ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸಹಕಾರಿ ಸಂಘದಿಂದ ಸನ್ಮಾನಿಸಲಾಯಿತು. ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬಡ್ಡಿ, ಉಪಾಧ್ಯಕ್ಷ ಶಂಕ್ರಪ್ಪ ಹಳವಳ್ಳಿ, ಸಹಕಾರಿ ಸಂಘದ ನಿರ್ದೇಶಕ ನಾಗಪ್ಪ ತೊಂಡುರ, ಸತೀಶ ಆಲದಕಟ್ಟಿ, ಡಿ.ಬಿ. ವಳಗೇರಿ, ಕಸ್ತೂರೆವ್ವ ಬೊಮ್ಮಣ್ಣವರ ಹಾಗೂ ಸದಸ್ಯರಾದ ಎಸ್‌.ಬಿ ಪಾಟೀಲ, ಎಮ್ ಜಿ‌ ಕೂಲಿ, ವಿರಣ್ಣ ಕೂಲಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ದೇವತಿ, ಕ್ಲರ್ಕ್ ನಾಗರಾಜ ಚಿಲ್ಲೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

promotions

promotions

Read More Articles