ಕೋಳಿ ಕೇಳಿ ಮಸಾಲೆ ಅರಿದ ಎಪಿಎಂಸಿ

ಬೆಳಗಾವಿ: ಬೆಳಗಾವಿಯಲ್ಲಿ ನಿರ್ಮಾಣವಾಗಿರುವ ಖಾಸಗಿ ತರಕಾರಿ ಮಾರುಕಟ್ಟೆಯ ವಿರುದ್ಧ ಕಹಳೆ‌ ಮೊಳಗಿಸಿರುವ ರೈತರು, ವರ್ತಕರು ಈಗ ಸರಕಾರದ ವಿರುದ್ಧ ಬುಗಿಲೇದಿದ್ದಾರೆ.

promotions

ಅನಧಿಕೃತವಾಗಿ ನಿರ್ಮಾಣ‌ವಾಗಿರುವ ತರಕಾರಿ ಮಾರುಕಟ್ಟೆಗೆ ಪರವಾನಿಗೆ ನೀಡಿದ್ದವರೆ ಈಗ ಅದರ ತನಿಖೆ ನಡೆಸುತ್ತಿರುವುದು ಹೋರಾಟಗಾರರಿಗೆ ಅನುಮಾನಕ್ಕೆ ಕಾರಣವಾಗಿದೆ.

promotions

ಜಿಲ್ಲಾಧಿಕಾರಿ ನಡೆಸಿದ ಸಭೆಯಲ್ಲಿ ತನಿಖೆ ನಡೆಸಿ ವರದಿ ನೀಡಬೇಕೆಂದರೂ ಕೆಲವರ ನಿರ್ಲಕ್ಷ್ಯದಿಂದ ಅದು ಅವ್ಯಾಹತವಾಗಿ ಅಕ್ರಮ ಖಾಸಗಿ ಮಾರುಕಟ್ಟೆ ವ್ಯಾಪಾರ ನಡೆಸಿದೆ ಎಂದರೆ ಅದು ಸರ್ಕಾರಿ ಅಧಿಕಾರಿಗಳ ಕೃಪೆಯಿಂದ.

ಜಿಲ್ಲಾಡಳಿತ ಕೋಳಿ ಕೇಳಿ ಮಸಾಲೆ ಅರೆಯುವುದನ್ನು ಬಿಟ್ಟು ತಮ್ಮಿಂದಲೇ ಆದ ಲೋಪದೋಷ ಕಂಡು‌‌ ಬಂದರೂ ಖಾಸಗಿ ಮಾರುಕಟ್ಟೆ ಮೇಲೆ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ಯಾಕೆ ನೋಡುತ್ತಿದೆ. ಇದು ಹೋರಾಟಗಾರರ ಪ್ರಶ್ನೆಯಾಗಿದೆ.

ಇವತ್ತು ಸಂಧಾನಕ್ಕೆ ಕಳಸುಸಿದ್ದು ಕಳ್ಳರನ್ನು. ಅದಕ್ಕೆ ಹೋರಾಟ ಮಾಡುತ್ತಿರುವವರು. ರೈತ ಸಂಘಟನೆಯ‌ ಹಿರಿಯ ಮುಖಂಡ ಮೋದಗಿ ಅವರು ಜಿಲ್ಲಾಡಳಿತದ ಲೇಟರ್ ಗೆ ಕ್ಯಾರೆ ಎನ್ನದೆ ಹೋರಾಟ ನಡೆಸಿದ್ದಾರೆ.

Read More Articles