ಬಜೆಟ್ ಪ್ರಕ್ರಿಯೆ ಪ್ರಾರಂಭವಾಗಿದೆ: ಸಿಎಂ

ಬೆಳಗಾವಿ: ಬಜೆಟ್ ಪ್ರಕ್ರಿಯೆ ಪ್ರಾರಂಭವಾಗಿದೆ. ಹಲವಾರು ಇಲಾಖೆಗಳ ಸಭೆ ನಡೆಸಿದ್ದೇನೆ ಸೋಮವಾರ ಮತ್ತು ಮಂಗಳವಾರದ ಸೆಷನ್ ಬಳಿಕ ಮತ್ತೆ ಸಭೆ ನಡೆಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು. ಶನಿವಾರ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಇದೆಲ್ಲಾ ಮುಗಿದ ಮೇಲೆ ಫೆ 25 ರ ಬಳಿಕ ಎಲ್ಲಾ ಇಲಾಖೆಗಳ ಬೇಡಿಕೆ ಗಮನಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಯನ್ನು ಗಮನಿಸಿ ಮುಂದಿನ ಬಜೆಟ್ ಮಾಡುತ್ತೇವೆ ಎಂದರು.

promotions

ನಮ್ಮ ಆರ್ಥಿಕ ಸ್ಥಿತಿ ಹಾಗೂ ಎಸ್ಒಎಸ್ ಮೊಬಲೈಜೆಷನ್ ಹೆಚ್ಚು ಮಾಡಲು ಆದೇಶಿಸಿದ್ದೇನೆ. ಎಲ್ಲವನ್ನೂ ರಿವೀವ್ ಮಾಡಿ ಬಜೆಟ್ ಮಂಡಿಸುತ್ತೇನೆ. ಉತ್ತರ ಕರ್ನಾಟಕಕ್ಕೆ ವಿಶೇಷ ಅನುದಾನ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ಬಜೆಟ್ ನಲ್ಲಿ ಏನು ಆಗುತ್ತದೆ ಎಂದು ನಾನು ಇವತ್ತು ಹೇಳಲು ಸಾಧ್ಯವಿಲ್ಲ, ಅದು ಸರಿಯಲ್ಲ ಎಂದರು.

promotions

ಹಿಜಾಬ್ ವಿವಾದದ ಹಿಂದಿರುವ ಸಂಘಟನೆಗಳ ಮೇಲೆ ಕ್ರಮ ವಿಚಾರಕ್ಕೆ ಉತ್ತರಿಸಿದ ಅವರು, ಈಗಾಗಲೇ ಕೇಸ್ ಕೋರ್ಟನಲ್ಲಿದೆ. ಡೇ ಟು ಡೇ ಹಿಯರಿಂಗ್ ಆಗುತ್ತಿದೆ, ಮಧ್ಯಂತರ ಆದೇಶ ಬಂದಿದೆ. ನಮ್ಮ ಮೊದಲನೇ ವಿಚಾರ ರಾಜ್ಯದಲ್ಲಿ ಶಾಂತಿ ನೆಲೆಸಬೇಕು, ಮಕ್ಕಳಲ್ಲಿ ಯಾವುದೇ ಭಿನ್ನಾಭಿಪ್ರಾಯ ಮೂಡದಂತೆ ಶಾಲಾ ಕಾಲೇಜು ಪ್ರಾರಂಭ ಮಾಡಬೇಕು, ಹೈಕೋರ್ಟ್ ಕೂಡ ಇದನ್ನೇ ಹೇಳಿದೆ ಎಂದರು.

ಎರಡು ವಿಚಾರಕ್ಕೆ ರಕ್ಷಣಾ ಸಚಿವರನ್ನ ಭೇಟಿಯಾಗಿದ್ದೆ. ಬೆಳಗಾವಿ ಸಮೀಪದ 750 ಎಕರೆ ಡಿಫೆನ್ಸ್ ಹುಲ್ಲುಗಾವಲಿನ ವಿಚಾರವಾಗಿ ಚರ್ಚಿಸಿದ್ದೇನೆ, ಮಾಹಿತಿ ತರಿಸಿಕೊಂಡು ಬೇಗನೆ ಒಂದು ನಿರ್ಣಯ ಮಾಡುತ್ತೇವೆ ಎಂದಿದ್ದಾರೆ.

ಸಂಗೊಳ್ಳಿಯಲ್ಲಿ ನಿರ್ಮಾಣ ಮಾಡಿರುವ ಸಂಗೊಳ್ಳಿ ರಾಯಣ್ಣ ಶಾಲೆಯನ್ನು ಮಿಲಿಟರಿ ಶಾಲೆ ಮಾಡಬೇಕೆಂದು ಮನವಿ ಮಾಡಿದ್ದೆ. ನಾನು ಬೆಂಗಳೂರಿಗೆ ಬಂದ ಮರುದಿನವೇ ಕರೆ ಮಾಡಿದರು.

ಈಗಾಗಲೇ ಈ ಕುರಿತು ಇನ್ಸಪೆಕ್ಷನ್ ಮಾಡಲಾಗಿದೆ, ಆದಷ್ಟು ಬೇಗ ಅದರ ಪರವಾಗಿ ನಿರ್ಣಯ ಮಾಡಲಾಗುವುದು ನಿರೀಕ್ಷಿಸಿ ಎಂದಿದ್ದಾರೆ ಎಂದರು.

Read More Articles