ಬಡ ಪತ್ರಕರ್ತರಿಗೆ ನಿವೇಶನ ಕೊಡಿ: ಡಿಸಿಗೆ ಮೊರೆ ಹೊದ ಪತ್ರಕರ್ತರು

ಬೆಳಗಾವಿ : ಪತ್ರಕರ್ತರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಮಂಗಳವಾರ ಬೆಳಗಾವಿ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪತ್ರಕರ್ತರು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

promotions

ಹಲವು ವರ್ಷಗಳಿಂದ ಬೆಳಗಾವಿ ಜಿಲ್ಲಾ ಕೇಂದ್ರದಲ್ಲಿ ಪತ್ರಕರ್ತರು ಪ್ರಾಮಾಣಿಕವಾಗಿ ಸೇವೆ ಮಾಡುತ್ತಾ ಬಂದಿದ್ದಾರೆ. ಅಲ್ಲದೇ ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯೆ ಸಂಪರ್ಕ ಸೇತುವೆಯಾಗಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು ಕಾರ್ಯ ಮಾಡುತ್ತಿವೆ.

promotions

ಈ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಹಾಗೂ ಛಾಯಾಗ್ರಾಹಕರು, ವಿಡಿಯೋ ಗ್ರಾಫರಗಳಿಗೆ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಸೇರಿದಂತೆ ಇನ್ನೀತರ ಕಡೆಗಳಲ್ಲಿ ಸರ್ಕಾರದಿಂದ ನಿವೇಶನ ನೀಡಬೇಕು ಎಂದರು.

ಬೆಳಗಾವಿ ನಗರದಲ್ಲಿ ಸುಮಾರು ವರ್ಷಗಳಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಾ ಬಂದಿರುವ ಅನೇಕ ಪತ್ರಕರ್ತರಿಗೆ ಇದುವರೆಗೂ ಸ್ವಂತ ಮನೆ, ನಿವೇಶನ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಆದ್ದರಿಂದ ಈ ಹಿಂದೆ ಪಡೆಯದೆ ಇರುವ ಪತ್ರಕರ್ತರಿಗೆ, ಕಾಮರಾ ಮೆನ್‌ಗಳಿಗೆ ಸರ್ಕಾರದಿಂದ ಉಚಿತ ಅಥವಾ ರಿಯಾಯತಿ ದರದಲ್ಲಿ ನಿವೇಶನ ಹಂಚಿಕೆ ಮಾಡಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಋಷಿಕೇಶ ಬಹದ್ದೂರ ದೇಸಾಯಿ, ಕೇಶವ ಆದಿ, ಮಹೇಶ ವಿಜಾಪುರ, ನೌಶಾದ ಬಿಜಾಪುರ, ವಿಲಾಸ ಜೋಶಿ, ರಾಜು ಗವಳಿ, ಮಹೇಶ ಭಗೀರಥ., ರಾಜಶೇಖರ ಹಿರೇಮಠ, ಕೀರ್ತನಾ ಕಾಸರಗೂಡು, ಸುರೇಶ ನೇರ್ಲಿ, ಪಾರೇಶ ಭೋಸಲೆ, ಜಗದೀಶ ಹೊಂಬಳಿ, ರವಿ ಗೋಸಾವಿ, ಸುನೀಲ ಪಾಟೀಲ, ಜಗದೀಶ ವಿರಕ್ತಮಠ, ಮಹಾಂತೇಶ ಕುರಬೇಟ, ಮಂಜುನಾಥ ಕೋಳಿಗುಡ್ಡ, ಚಂದ್ರಕಾಂತ ಸುಗಂಧಿ, ಮಂಜುನಾಥ ಪಾಟೀಲ, ಅಡಿವೆಪ್ಪ ಪಾಟೀಲ, ಪ್ರವೀಣ ಶಿಂಧೆ , ಮೆಹಬೂಬ್ ಮಕಾನದಾರ, ಅನಿಲ ಕಾಜಗಾರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

Read More Articles