ಸಚಿವ ಈಶ್ವರಪ್ಪ ವಜಾಗೆ ಆಗ್ರಹಿಸಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಬೆಳಗಾವಿ: ವಿವಾದಾತ್ಮಕ ಹೇಳಿಕೆ ನೀಡಿರುವ ಸಚಿವ ಕೆ.ಎಸ್. ಈಶ್ವರಪ್ಪ ವಜಾಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿತು.

promotions

ನಗರದ ಕಾಂಗ್ರೆಸ್‌ ಭವನದದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೆಳಗಾವಿ ಗ್ರಾಮೀಣ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟಿಸಿದರು.

promotions

ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿರುವ ಸಚಿವ ಈಶ್ವರಪ್ಪ ನವರ ನಡೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾಲಗಟ್ಟಿ ಮಾತನಾಡಿ, ಕೆ.ಎಸ್ ಈಶ್ವರಪ್ಪ ಒಬ್ಬ ಅವಿವೇಕಿ, ಕಟಪ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ. ಅವರು ಮೊದಲು ರಾಜೀನಾಮೆ ನೀಡಬೇಕು. ಯಾಕೆ ಈಶ್ವರಪ್ಪರನ್ನ ಸರ್ಕಾರ ಬಂಧಿಸಿಲ್ಲ? ಎಂದು ಪ್ರಶ್ನಿಸಿದರು.

ದೇಶದಲ್ಲಿ ಒಳ್ಳೆಯ ಆಡಳಿತ ನೀಡುತ್ತೆವೆ ಎಂದು ಗದ್ದುಗೆ ಏರಿ, ಜನರಲ್ಲಿ ವಿಷ ಬೀಜ ಭೀತಿ ಅಶಾಂತಿ ಸೃಷ್ಟಿಸುತ್ತಿದ್ದಾರೆ. ಇಂತಹ ಭ್ರಷ್ಟ ಆಡಳಿತ ಅಧಿಕಾರ ಬಿಟ್ಟು ಕೆಳಗೆ ಇಳಿಯಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಅಧಿಕಾರಕ್ಕೆ ಬಂದಾಗ ದೇಶದ ಹಿತ ಕಾಪಾಡಿಕೊಂಡು ಹೋಗುತ್ತೇವೆ ಎಂದು ಪ್ರಮಾಣ ಮಾಡಿದ್ದಾರೆ, ಆ ಮಾತಿನಂತೆ ನಡೆಯಬೇಕೆಂದರು. ಗೌರವಯುತ ಸ್ಥಾನದಲ್ಲಿರುವ ಬಚ್ಚಲಬಾಯಿ ಸಚಿವ ಈಶರಪ್ಪ ತಕ್ಷಣವೇ ಅಧಿಕಾರಿಂದ ಕೆಳಗೆ ಇಳಿಬೇಕು ಎಂದರು.

ಈಶ್ವರಪ್ಪರವರ ರಾಜೀನಾಮೆ ಬೇಕಾಗಿಲ್ಲ. ಅವರನ್ನು ವಜಾ ಮಾಡಿ ರಾಷ್ಟ್ರದ್ರೋಹದ ಕೇಸ್ ಹಾಕಬೇಕು. ಬಿಜೆಪಿಯವರಿಗೆ ರಾಷ್ಟ್ರ ಧ್ವಜ ಎಂದರೆ ಏನು ಎಂದು ಗೊತ್ತಿಲ್ಲ. ತ್ರಿವರ್ಣ ಧ್ವಜ ಕೊಟ್ಟವರು ಕಾಂಗ್ರೆಸ್‌ನವರು, ಕಾಂಗ್ರೆಸ್‌ನವರು ಸ್ವಾತಂತ್ರ್ಯ ತಂದು ಕೊಟ್ಟಿದ್ದಕ್ಕೇ ಬಿಜೆಪಿಯವರು ಮುಖ್ಯಮಂತ್ರಿಯಾಗಿದ್ದಾರೆ ಎಂದು ಆಕ್ರೋಶ ಹೋರಹಾಕಿದರು.

ಸಂವಿಧಾನದಕ್ಕೆ ಅಗೌರವವಾಗಿ ಮಾತನಾಡಿದ್ದಕ್ಕೆ ಕೇಂದ್ರ ಸಚಿವರಾಗಿದ್ದ ಅನಂತ್‌ಕುಮಾರ್ ಹೆಗಡೆ ರಾಜೀನಾಮೆ ಪಡೆಯಲಿಲ್ಲವೇ? ಮಹಾರಾಷ್ಟ್ರದಲೂ ಸಚಿವರುಗಳು ರಾಜೀನಾಮೆ ಕೊಡಲಿಲ್ಲವೇ? ಎಂದು ಪ್ರಶ್ನಿಸಿ ಈಶ್ವರಪ್ಪರವರನ್ನು ಕೈಬಿಡಲೇಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಸಚಿವ ಈಶ್ವರಪ್ಪರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಜಿಲ್ಲಾಡಳಿತ ಮೂಲಕ ರಾಜ್ಯಪಾಲರಿಗೆ ಮನವಿ‌ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಬೆಳಗಾವಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಎಂಜೆ, ಬಸವರಾಜ ಶೇಂಗಾವಿ , ಬಾಳೇಶ ದಾಸನಟ್ಟಿ, ಮಂಜುನಾಥ ಕಾಂಬಳೆ, ಮೇಗಣಾ ದೇಸಾಯಿ, ಭಾರತಿ ಕೋಪರ್ಡೆ, ರೋಹಿಣಿ ಬಾಬ್ ಶೇಟ್ಟ, ಅಕ್ಷತಾ ತಳವಾರ ಸೇರಿದಂತೆ ಕಾಂಗ್ರೆಸ್‌ ಕಾರ್ಯಕರ್ತರು ಭಾಗವಹಿಸಿದ್ದರು.

Read More Articles