ಸಾಹುಕಾರ್ ಸವದಿ ಸಿಎಂ ಆಗ್ಲಿ: ಹರಕೆ ಹೊತ್ತ ಅಭಿಮಾನಿ
- 14 Jan 2024 , 9:43 PM
- Belagavi
- 107
ಅಥಣಿ : ಮಾಜಿ ಉಪಮುಖ್ಯಮಂತ್ರಿ, ಮಾಜಿ ಶಾಸಕ, ವಿಧಾನಪರಿಷತ್ ಲಕ್ಷ್ಮಣ ಸವದಿ ಅವರು ಮುಂಬರುವ ದಿನಮಾನದಲ್ಲಿ ಕರ್ನಾಟಕದ ಮುಖ್ಯಮಂತ್ರಿಯಾಗಲಿ ಎಂದು ಅಥಣಿ ಗ್ರಾಮೀಣ (ಸಂಕೋನಟ್ಟಿ) ಗ್ರಾ.ಪಂ ಸದಸ್ಯ ಪರಶುರಾಮ ಸೋನಕರ ಅವರು ಅಂಜನಾದ್ರಿಯ ಹಣಮಪ್ಪನ ಬೆಟ್ಟವನ್ನು ಬಾಳೆ ಹಣ್ಣಿನ ಗೊಣೆಯನ್ನು ಹೊತ್ತು 575 ಮೆಟ್ಟಿಲು ಹತ್ತಿ, ಬಾಳೆ ಹಣ್ಣಿನ ಗೊಣೆಯನ್ನು ಹಣಮಪ್ಪನಿಗೆ ಪೂಜೆಮಾಡಿಸಿ ಎಲ್ಲ ಮಂಗಗಳಿಗೆ ತಿನ್ನಿಸಿ ಇತರರಿಗೂ ಹಂಚಿರುವುದು ವಿಶೇಷವಾಗಿದೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಲಕ್ಷಮಣ ಸವದಿ ಅವರ ಅಪ್ಪಟ ಅಭಿಮಾನಿಯಾದ ಪರಶುರಾಮ ಸೋನಕರ ಅವರು ಮುಂಬರುವ ಚುಣಾವಣೆಯಲ್ಲಿ ಬಿಜೆಪಿ ಕರ್ನಾಟಕದಾದ್ಯಂತ ವಿಜಯಶಾಲಿಯಾಗುತ್ತೆ. ಮಾನ್ಯ ಲಕ್ಷ್ಮಣ ಸವದಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ವಿಶ್ವಾಸ ನಮಗಿದೆ. ಆದಷ್ಟು ಬೇಗ ರಾಜಕೀಯ ಚತುರರಾದ ಲಕ್ಷ್ಣಣ ಸವದಿ ಅವರು ಮುಖ್ಯಮಂತ್ರಿಯಾಗಲಿ ಎಂದು ಇವತ್ತು ನಾನು ಹರಕೆ ಹೊತ್ತು ಬಾಳೆಹಣ್ಣಿನ ಗೊಣೆಯನ್ನು ಹೊತ್ತು ದೇವರಿಗೆ ಅರ್ಪಿಸಿದ್ದೆನೆ ಎಂದರು.

ಈ ವೇಳೆ ಅನೀಲ ಕೋರೆ, ಶಿವಾನಂದ ಹಲವೇಗಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.










