ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ
- 15 Jan 2024 , 1:34 AM
- Belagavi
- 121
ಬೆಳಗಾವಿ: ಸೋಮವಾರ ಬೆಳಗಾವಿ ನಗರದ ಭಾಗ್ಯನಗರದಲ್ಲಿರುವ ಪ್ರತಿಷ್ಠಿತ ಸ್ಕೂಲ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿತರ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ನಿಂಗನಗೌಡ ಪಾಟೀಲ್ ಮತ್ತು ತಂಡದವರು ದಾಳಿ ಮಾಡಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಆರೋಪಿತರನ್ನು ಬಂಧಿಸಿದ್ದಾರೆ.

ನಿಖಿಲ್ ಪಾಟೀಲ್, 27 ವರ್ಷ ಭಾಗ್ಯನಗರ, ಬೆಳಗಾವಿ, ಮೋನಿಷ ಪಾಟೀಲ್ 26 ವರ್ಷ, ಅನಗೊಳ ಬೆಳಗಾವಿ ಇವರನ್ನು ವಶಕ್ಕೆ ಪಡೆದಿದ್ದು, ಇವರ ಬಳಿಯಿಂದ ಕೆಳಕಂಡ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

1.1 ಕೆಜಿ ಗಾಂಜಾ, 02 ಮೊಪೆಡ್ ಬೈಕ್ ಗಳು, 02 ಮೊಬೈಲ್ ಈ ಕುರಿತು ಆರೋಪಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸದರಿ ಗಾಂಜಾವನ್ನು ಮಹಾರಾಷ್ಟ್ರ ರಾಜ್ಯದಿಂದ ತಂದು ಮಾರಾಟ ಮಾಡುತ್ತಿದ್ದಾಗಿ ತಿಳಿಸಿದ್ದು, ಈ ಕುರಿತು ಸಿ. ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದು ಇರುತ್ತದೆ.










