ಗಡಿ, ಭಾಷೆ, ಜಾತಿ ಧರ್ಮ ಎಲ್ಲವನ್ನು ಮೀರಿ ನಿಲ್ಲುವುದೇ ಸ್ನೇಹ
- 15 Jan 2024 , 3:02 AM
- Mysuru
- 176

ನನ್ನ ಪ್ರಕಾರ ಒಳ್ಳೆಯ ಸ್ನೇಹಿತರು ಎಂದರೆ ದೇವರಿಗೆ ಸಮ, ಏಕೆಂದರೆ ಒಬ್ಬ ಒಳ್ಳೆಯ ಸ್ನೇಹಿತ ಅಥವಾ ಗೆಳೆಯ ನಮ್ಮಲಿರುವ ಕಷ್ಟ, ಸುಖಗಳನ್ನು ನಾವು ಹೇಳದೆ ಇದ್ದರೂ ಅರ್ಥ ಮಾಡಿಕೊಂಡು ಅವುಗಳ ನೋವು ನಲಿವು ಗಳನು ಹಂಚಿಕೊಂಡು ಪರಸ್ಪರ ಒಬ್ಬರಲೋಬ್ಬರು ಬೆರೆತು ಬಾಳುವುದೇ ಸ್ನೇಹವಾಗಿದೆ. ನಮ್ಮ ಜೀವನದಲ್ಲಿ ಹಲವಾರು ಮಂದಿ ಸ್ನೇಹಿತರಾಗಿ ಬರುತ್ತಾರೆ. ಬ್ಯಾಲದಿಂದ ಹಿಡಿದು ವೃದ್ಧಾಪ್ಯದ ತನಕ ಸ್ನೇಹವೆನ್ನುವುದು ಸಿಗುವುದು. ಇದರಲ್ಲಿ ಕೆಲವು ಮಂದಿ ಪ್ರಾಣ ಸ್ನೇಹಿತರಾದರೆ, ಇನ್ನು ಕೆಲವರು ಹಾಗೆ ಸ್ನೇಹಿತರಾಗಿ ಉಳಿಯುವರು. ಸ್ನೇಹವು ಗಡಿ, ಭಾಷೆ, ಜಾತಿ ಧರ್ಮ ಎಲ್ಲವನ್ನು ಮೀರಿ ನಿಲ್ಲುವಂತಹದ್ದಾಗಿದೆ. ಜೀವನದ ಉದ್ದಗಲಕ್ಕೂ ಸ್ನೇಹ ಅನ್ನುವುದು ಒಂದು ದೊಡ್ಡ ಅಂಶವಾಗಿದೆ. ಜೀವನದ ಪಯಣದಲ್ಲಿ ನಮಗೆ ಸಿಕ್ಕ ಸ್ನೇಹಿತರೆಲ್ಲರೂ ಒಳ್ಳೆಯವರು ಅಥವಾ ಕೆಟ್ಟವರೆಂದೆ ಹೇಳಲು ಆಗುವುದಿಲ್ಲ.


ನನ್ನ ಸ್ನೇಹಿತರು: ನನ್ನ ಜೀವನದಲ್ಲಿ ಹಲವು ಸ್ನೇಹಿತರು ಒಳ್ಳೆಯವರು, ಇನ್ನು ಕೆಲವರು ಅವರ ಸ್ವಾರ್ಥ ಕತೆಗೆ ತಕ್ಕಂತೆ ನಮ್ಮನು ಬಳಸಿಕೊಂಡವರ ಆ ವಿಷಯ ಬೇರೆ. ನನ್ನ ಕಷ್ಟಗಳಿಗೆ ಸರಿಯಾದ ಸಮಯಕ್ಕೆ ಸ್ಪಂದಿಸಿ, ನನ್ನ ಯೋಗ ಕ್ಷೇಮದ ಬಗ್ಗೆ ಸುಖ ದುಃಖದ ಸಂದರ್ಭಗಳಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗಿಯಾದ ಎಲ್ಲರಿಗೂ ನೇರವಾಗಿ ಧನ್ಯವಾದಗಳನ್ನು ಹೇಳಲು ಆಗದಿದ್ರು ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನನ್ನ ಒಂದು ಕನಸು: ದೊಡ್ಡ ದೊಡ್ಡ ವ್ಯಕ್ತಿಗಳೆಲ್ಲಾ ನನ್ನ ಸ್ನೇಹಿತರಾಗುವ ಬದಲು ನನ್ನ ಸ್ನೇಹಿತರೆಲ್ಲ ದೊಡ್ಡ ದೊಡ್ಡ ವ್ಯಕ್ತಿಗಾಳಲಿ ಎಂಬ ಕನಸನ್ನು ಹೊಂದಿದವ ನಾನು. ಸ್ನೇಹ ಎನ್ನುವುದು ಕೇವಲ ಶುಭಾಶಯ ವಿನಿಮಯ ಆಗದೆ ದುರ್ಯೋಧನ, ಕರ್ಣ, ಕೃಷ್ಣ, ಅರ್ಜುನ ರಾಮ, ಆಂಜನೇಯ ರೀತಿ ಇರಬೇಕೆಂದು ಆಶಿಸುವ ವ್ಯಕ್ತಿ.
ಜೀವನದಲ್ಲಿ ಏನೇ ಏರು ಪೇರಾದರು ನನ್ನ ಜೊತೆ ಸದಾ ನಿಲ್ಲುವ ಎಲ್ಲ ಗೆಳೆಯರಲ್ಲಿ ಪ್ರಮುಖರ ಕೆಲ ಹೆಸರುಗಳನ್ನು ಹೇಳಲು ಇಚ್ಛಿಸುತ್ತೇನೆ. ಪ್ರಶಾಂತ್, ಹೇಮಂತ್, ರವೀಂದ್ರ, ಯತಿ, ಅಭಿ, ಪುಟ್ಟರಾಜು, ಅಶೋಕ, ವರ್ಷಿಣಿ ಇನ್ನು ಹಲವು ಜನರು ಇದ್ದಾರೆ ಹೇಳುತ್ತಾ ಹೋದರೆ ಹೆಸರುಗಳು ಮುಗಿಯುವುದಿಲ್ಲ, ಸ್ನೇಹಿತರು ಬಗ್ಗೆ ಪದಗಳು ಸಾಲೋದಿಲ್ಲ, ಹಗಲು, ರಾತ್ರಿಯ ದಿನಗಳು ಕಳೆದದ್ದೇ ಗೊತ್ತಾಗುವುದಿಲ್ಲ. ಈ ಸ್ನೇಹ ಅನ್ನೋ ಎರಡಕ್ಷರವನ್ನು ಒಬ್ಬ ವ್ಯಕ್ತಿಯಲ್ಲಿ ಕಟ್ಟಿ ಹಾಕೋದು ಕಷ್ಟ. ಆಗಸ್ಟ್ ಮೊದಲನೇ ಭಾನುವಾರ ಬರುತ್ತಿದ್ದಂತೆಯೇ ಹ್ಯಾಪಿ ಫ್ರೆಂಢ್ ಶಿಪ್ ಡೇ ಎಂದು ಕೈ ಕುಲುಕಿದ ಮಾತ್ರಕ್ಕೆ ಅವನ ಋಣ ತೀರಿಹೋಗೋಲ್ಲ ಪ್ರತಿ ವ್ಯಕ್ತಿಯ ಬದುಕಿನಲ್ಲೂ ಈ ಸ್ನೇಹ ಅನ್ನೋದು ವಿಶಾಲ.










