ರಷ್ಯಾ ಶೆಲ್ ದಾಳಿಗೆ ಬಲಿಯಾದ ನವೀನ್ ತಂದೆಗೆ ನರೇಂದ್ರ ಮೋದಿ ಸಾಂತ್ವನ

  • 14 Jan 2024 , 9:37 PM
  • world
  • 129

ಉಕ್ರೇನ್ ಯುದ್ಧ ಭೂಮಿಯಲ್ಲಿ ರಷ್ಯಾ ಶೆಲ್ ದಾಳಿಗೆ ಖಾರ್ಕೀವ್ ನಗರದಲ್ಲಿ ಮೃತಪಟ್ಟಂತ ಕರ್ನಾಟಕದ ಹಾವೇರಿ ಮೂಲಕ ನವೀನ್ ತಂದೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮುಖಾಂತರ ಸಾಂತ್ವಾನ ಹೇಳಿದ್ದಾರೆ.

promotions

 

promotions

ಕರ್ನಾಟಕದ ಹಾವೇರಿಯ ನವೀನ್ ಉಕ್ರೇನ್ ನ ಖಾರ್ಕೀವ್ ನಲ್ಲಿನ ಸೂಪರ್ ಮಾರ್ಕೆಟ್ ಬಳಿಯಲ್ಲಿ ಬೆಳಿಗ್ಗೆ ತಿಂಡಿ ತರೋದಕ್ಕೆ ತೆರಳಿದ್ದಂತೆ ರಷ್ಯಾ ಸೇನೆಯಿಂದ ನಡೆಸಿದಂತೆ ಶೆಲ್ ದಾಳಿಯಿಂದಾಗಿ ಸಾವನ್ನಪ್ಪಿದ್ದರು.

ಉಕ್ರೇನ್ ಯುದ್ಧ ಭೂಮಿಯಲ್ಲಿ ಮೊದಲ ಭಾರತೀಯ ವೈದ್ಯಕೀಯ ವಿದ್ಯಾರ್ಥಿಯೊಬ್ಬನ ಬಲಿಯಾಗಿತ್ತು.

ಉಕ್ರೇನ್ ಯುದ್ಧ ಭೂಮಿಯಲ್ಲಿ ಮೃತಪಟ್ಟಂತ ನವೀನ್ ತಂದೆಗೆ ಇಂದು ಕರೆ ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು, ದೇಶವೇ ನಿಮ್ಮೊಂದಿಗಿದೆ, ಮಗನ ಸಾವನ್ನು ಅರಗಿಸಿಕೊಳ್ಳುವಂತ ಶಕ್ತಿಯನ್ನು ಆ ದೇವರು ನೀಡಲಿ. ಭಗವಂತ ನಿಮ್ಮ ಕುಟುಂಬಕ್ಕೆ ಮಗನ ಸಾವಿನ ದುಖ ಭರಿಸುವ ಶಕ್ತಿ ನೀಡಲಿ ಎಂದು ಸಾಂತ್ವಾನ ಹೇಳಿದ್ದಾರೆ.

Read More Articles