ಪುನೀತ್ ರಾಜ್ ಕುಮಾರ್ ಬದುಕು ಆದರ್ಶಪ್ರಾಯ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು : ನಮ್ಮೆಲ್ಲರ ಅಚ್ಚುಮೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಬದುಕು, ಸಾರ್ವಜನಿಕವಾಗಿ ಅವರ ನಡವಳಿಕೆ, ಬಡವರಿಗೆ ಸಹಾಯ ಮಾಡಿದ ರೀತಿ ಆದರ್ಶಪ್ರಾಯ ಹಾಗೂ ಪ್ರೇರಣೆದಾಯಕವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

promotions

ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ. ಅವರ ಕೆಲಸಗಳನ್ನು ನಾವೆಲ್ಲರೂ ಸ್ಮರಿಸಬೇಕು ಎಂದರು. ಅವರು ಬದುಕಿದ್ದಿದ್ದರೆ ಅವರ 47 ನೇ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದೆವು.ಅವರನ್ನು ಕಳೆದುಕೊಂಡು ದುಃಖದಲ್ಲಿದ್ದರೂ ಕೂಡ ಅವರ ಬದುಕು ನಮಗೆ ಸ್ಫೂರ್ತಿಯಾಗಿದೆ ಎಂದರು.

promotions

ಜೇಮ್ಸ್ ಚಿತ್ರಕ್ಕೆ ಶುಭ ಕೋರಿದ ಸಿಎಂ

ಪುನೀತ್ ಅಭಿನಯದ ಸಿನಿಮಾ ಜೇಮ್ಸ್ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಸಿನಿಮಾ ಯಶಸ್ವಿಯಾಗಲಿ ಎಂದು ಮುಖ್ಯಮಂತ್ರಿಗಳು ಶುಭಾಶಯಗಳನ್ನು ಕೋರಿದರು.

ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿ

ಪುನೀತ್ ಅವರಿಗೆ ಮರಣೋತ್ತರ ವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲು ಆದಷ್ಟು ಶೀಘ್ರವಾಗಿ ಕುಟುಂಬದ ಸದಸ್ಯರೊಂದಿಗೆ ಮಾತನಾಡಿ ದಿನಾಂಕ ನಿಗದಿ ಮಾಡಲಾಗುವುದು. ಪುನೀತ ಹಾಗೂ ಡಾ: ರಾಜ್ ಕುಮಾರ್ ಅವರಿಗೆ ಗೌರವ ಬರುವ ರೀತಿಯಲ್ಲಿ ಕಾರ್ಯಕ್ರಮ ಏರ್ಪಡಿಸಲು ಸಮಿತಿಯನ್ನು ರಚಿಸಲಾಗುವುದು ಎಂದರು.

Read More Articles