ಮೇಯರ್ ಅಯ್ಕೆ ಮಾಡಿ ಪಾಲಿಕೆ ಬಜೆಟ್ ಮಂಡಿಸಿ: ಟೋಪಣ್ಣವರ

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ಬಜೆಟ್ ಮೇಯರ್, ಉಪಮೇಯರ್ ಆಯ್ಕೆಯಾದ ಮೇಲೆ ನಡೆಯಲಿ ಎಂದು ಆಮ್ ಆದ್ಮಿ ಉತ್ತರ ವಲಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಆಗ್ರಹಿಸಿದ್ದಾರೆ.

promotions

ಈ ಹಿಂದಿನ ಮೇಯರ್, ಉಪಮೇಯರ್ ಅವಧಿ ಮುಗಿದು ಬರೋಬರಿ ಎರಡೂವರೆ ವರ್ಷದ ಬಳಿಕ ಪಾಲಿಕೆಯ ಆಡಳಿತಾಧಿಕಾರಿಯೇ ಪಾಲಿಕೆ ಬಜೆಟ್ ಮಂಡಿಸಿದ್ದರು. ಆದರೆ ಪಾಲಿಕೆಯ ಚುನಾವಣೆ ಮುಗಿದು ಆರು ತಿಂಗಳು ಕಳೆದರೂ ಸ್ಥಳೀಯ ಬಿಜೆಪಿ ಶಾಸಕರು ತಮ್ಮ ಪ್ರಭಾವ ಬೆಳೆಸಿ ಮತ್ತೇ ಪಾಲಿಕೆಯ ಆಡಳಿತಾಧಿಕಾರಿಯಿಂದಲೇ ಬಜೆಟ್ ಮಂಡಿಸುತ್ತಿರುವುದು ಖಂಡನೀಯ.

promotions

ಸ್ಥಳೀಯ ಬಿಜೆಪಿ ಶಾಸಕರ ಹಸ್ತಕ್ಷೇಪ ನಿಟ್ಟಿನಲ್ಲಿ ಮೇಯರ್, ಉಪಮೇಯರ್ ಆಯ್ಕೆ ವಿಳಂಬ ಮಾಡುತ್ತಿದ್ದಾರೆ‌. ಜನರ ಹಿತ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಮೇಯರ್, ಉಪಮೇಯರ್ ಆಯ್ಕೆ ಮಾಡಿ ಬಳಿಕ ಪಾಲಿಕೆ ಬಜೆಟ್ ಮಂಡನೆ ಮಾಡಬೇಕು ಇಲ್ಲದಿದ್ದರೇ ಪಾಲಿಕೆಯ ಎದುರು ಉಗ್ರ ಹೋರಾಟ ಮಾಡಲಾಗುವುದು ಟೋಪಣ್ಣವರ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Read More Articles