ದೇಶದ ಯೋಧನ ಸಮಾಜ ಸೇವೆಗೆ ಸಲಾಂ
- 15 Jan 2024 , 1:13 AM
- Belagavi
- 127
ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಕುರಣಿ ಗ್ರಾಮದ ಗುರುರಾಜ ಚೌಗಲಾ ದೇಶದ ರಕ್ಷಣೆಗಾಗಿ ಭೂ ಸೇನೆಯಲ್ಲಿ 17 ವರ್ಷಗಳ ಕಾಲ ಕಾಶ್ಮೀರ, ಅಂಡಮಾನ್, ಸೌತ್ ಆಫ್ರಿಕಾ, ರಾಜಸ್ಥಾನ ಹೀಗೆ ಹಲವು ಕಡೆ ಸೇವೆ ಸಲ್ಲಿಸಿ ಕಳೆದ ಒಂದು ವರ್ಷದ ಹಿಂದೆ ನಿವೃತ್ತಿ ಪಡೆದು ಸ್ವ ಗ್ರಾಮಕ್ಕೆ ಮರಳಿದ್ದಾರೆ.

ಇವರು ದೇಶದ ರಕ್ಷಣೆಗಾಗಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ಮರಳಿದರು ಕೂಡ ಇಲ್ಲಿ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಸೇವೆ ಗೈಯುತ್ತಿದ್ದಾರೆ.

ಇಂದು ಅವರ ಹುಟ್ಟಿದಹಬ್ಬದ ಪ್ರಯುಕ್ತ ಬುದ್ಧಿ ಮಾಂದ್ಯಮ, ಅನಾಥ ಆಶ್ರಮದ ಮಕ್ಕಳ ಜೊತೆಗೆ ಕೇಕ್ ಕಟ್ ಮಾಡಿ ಎಲ್ಲರಿಗು ಸಿಹಿ ಹಂಚುವ ಮೂಲಕ ಊಟದ ವ್ಯವಸ್ಥೆ ಮಾಡಿ ಮಕ್ಕಳ ಜೊತೆಗೆ ಊಟ ಮಾಡುವ ಮೂಲಕ ಸೇವೆಗೈದರು, ಇದಷ್ಟೇ ಅಲ್ಲದೇ ಗ್ರಾಮದ ಗ್ರಂಥಾಲಯಗಳಿಗೆ ಸ್ವಂತ ಖರ್ಚಿನಿಂದ ಪುಸ್ತಕ ಸೇವೆ, ಕೋವಿಡ್ ಸಂದರ್ಭದಲ್ಲಿ, ಹಲವರಿಗೆ ಪುಡ್ ಕಿಟ್, ಊಟದ ವ್ಯವಸ್ಥೆ ಕೂಡ ಮಾಡಿದ್ದಾರೆ.
ಒಟ್ಟಾರೆಯಾಗಿ ಈ ಯೋಧ ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸಿ ತವರಿಗೆ ಮರಳಿದರು ಕೂಡ ಸಮಾಜ ಸೇವೆ ಮಾಡುತ್ತಿರುವದು ನಿಜಕ್ಕೂ ನಮ್ಮೆಲ್ಲರ ಸೌಭಾಗ್ಯ.










