ಕಳೆದು ಹೋದ ಬೆಲೆ ಬಾಳು ಮೊಬೈಲ್ ಪ್ರಯಾಣಿಕರಿಗೆ ತಲುಪಿಸಿದ ಕೇಂದ್ರ ತನಿಖಾ ತಂಡ

ಬೆಳಗಾವಿ : ಸಾರಿಗೆ ಸಂಸ್ಥೆಯ ಬಸ್ಸಿನಲ್ಲಿ ಬಿಟ್ಟು ಹೋಗಿದ್ದ ಬೆಲೆ ಬಾಳುವ ಮಬೈಲ್ ನ್ನು ಸಂಬಂಧಿಸಿದ ಪ್ರಯಾಣಿಕರಿಗೆ ಮುಟ್ಟಿಸುವಲ್ಲಿ ಕೇಂದ್ರ ತನಿಖಾ ತಂಡ ಯಶಸ್ವಿಯಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಬೆಳಗಾವಿ ವಿಭಾಗಗಕ್ಕೆ ಸಂಬಂಧಿಸಿದ ಕೆಎ-22, ಎಪ್-2296 ಬೆಳಗಾವಿ 1ನೇ ಘಟಕದ ವಾಹನವು ದಿನಾಂಕ:14.03.2022 ರಂದು ಬೆಳಗಾವಿಯಿಂದ ಬೆಂಗಳೂರು ಮಾರ್ಗದಲ್ಲಿ ಕಾರ್ಯಾಚರಣೆಗೊಳ್ಳುತ್ತಿದ್ದಾಗ, ಅದೇ ಬಸ್ಸಿನಲ್ಲಿ ಹರಿಹರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ, ಶ್ರೀಮತಿ ಸುನೀತಾ. ಪಿ ರವರು. ಬೆಂಗಳೂರಿನಲ್ಲಿ ತಮ್ಮ ಮೊಬೈಲ್ ದೂರವಾಣಿಯನ್ನು ಬಸ್ಸಿನಲ್ಲಿಯೇ ಮರೆತು ಹಾಗೆಯೇ ಬಿಟ್ಟು ಹೋಗಿದ್ದರು.

promotions

ತದ ನಂತರ ಮರಳಿ ಬಂದು ಕರ್ತವ್ಯನಿರತ ಚಾಲನಾ ಸಿಬ್ಬಂದಿಯನ್ನು ವಿಚಾರಿಸಲಾಗಿ, ಈ ಕುರಿತು ತಮಗೆ ಮಾಹಿತಿ ಇಲ್ಲವೆಂದು ತಿಳಿಸಿರುತ್ತಾರೆ. ಇದಾದ ನಂತರ ಕೆಲವು ಗಂಟೆಗಳಲ್ಲಿ ವಾ.ಕ.ರ.ಸಾ.ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಮಾಹಿತಿ ತಿಳಿದು, ಕೇಂದ್ರ ಕಛೇರಿಯ ತನಿಖಾದಳದ ಸಿಬ್ಬಂದಿಗೆ ವಾಹನ ತಪಾಸಣೆ ಮಾಡಿ, ವರದಿ ನೀಡುವಂತೆ ಸೂಚಿಸುತ್ತಾರೆ.

promotions

ತಕ್ಷಣವೇ ಕಾರ್ಯಪ್ರವೃತ್ತರಾದ ತನಿಖಾ ಸಿಬ್ಬಂದಿಗಳು, ವಾಹನ ಬೆಂಗಳೂರಿನಿಂದ ಬೆಳಗಾವಿಗೆ ಬರುತ್ತಿದ್ದಂತೆ ಕೇಂದ್ರ ಬಸ್ ನಿಲ್ದಾಣದಲ್ಲಿ ಸಕಾಲದಲ್ಲಿ ತನಿಖೆ/ತಪಾಸಣೆ ಮಾಡಿ, ಚಾಲನಾ ಸಿಬ್ಬಂದಿಯಿಂದ ಮೊಬೈಲ್ ದೂರವಾಣಿಯನ್ನು ವಶಪಡಿಸಿಕೊಂಡು, ದಿನಾಂಕ:25.03.2022 ರಂದು ಮೊಬೈಲ್ ದೂರವಾಣಿಯನ್ನು ಕಳೆದುಕೊಂಡ ಪ್ರಯಾಣಿಕರಾದ ಶ್ರೀಮತಿ ಸುನೀತಾ. ಪಿ ರವರ ಸ್ವ-ಸ್ಥಳವಾದ ಬೆಂಗಳೂರಿಗೆ ಹೋಗಿ ತಲುಪಿಸಲು ಯಶಸ್ವಿಯಾಗಿದ್ದಾರೆ.

ದಿನ ನಿತ್ಯದ ಕಾರ್ಯಾಚರಣೆಯ ಸಂದರ್ಭಗಳಲ್ಲಿ ಸಂಸ್ಥೆಯ ಚಾಲನಾ ಸಿಬ್ಬಂದಿಗಳು ಪ್ರಯಾಣದ ಸಮಯದಲ್ಲಿ, ಪ್ರಯಾಣಿಕರು ಕಳೆದುಕೊಂಡ ಅನೇಕ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಹಿಂದಿರುಗಿಸಿ ಕರ್ತವ್ಯ ಪ್ರಜ್ಞೆ ಹಾಗೂ ಪ್ರಾಮಾಣಿಕತೆಯನ್ನು ಮೆರೆದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಗಳಿಸಿರುವ ಅನೇಕ ನಿದರ್ಶನಗಳಿವೆ.

ಆದರೆ ಪ್ರಯಾಣಿಕರು ಪ್ರಯಾಣದ ಸಮಯದಲ್ಲಿ ಮರೆತು ಅಥವಾ ಬಿಟ್ಟು ಹೋದ ಯಾವುದೇ ವಸ್ತುಗಳು ಚಾಲನಾ ಸಿಬ್ಬಂದಿಗೆ ಸಿಕ್ಕರೆ, ತಕ್ಷಣವೇ ಮೇಲಾಧಿಕಾರಿಗಳ ಗಮನಕ್ಕೆ ತಂದು ಅದನ್ನು ಸಂಬಂಧಿಸಿದ ಪ್ರಯಾಣಿಕರಿಗೆ ಸಕಾಲದಲ್ಲಿ ತಲುಪಿಸುವ ವ್ಯವಸ್ಥೆ ಆಗಬೇಕು. ಇಂತಹ ಸಂದರ್ಭಗಳಲ್ಲಿ ಯಾವುದೇ ಲೋಪಕ್ಕೆ ಸಂಸ್ಥೆಯು ಅವಕಾಶ ನೀಡುವದಿಲ್ಲವೆಂದು ವಾ.ಕ.ರ.ಸಾ.ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ತಿಳಿಸಿದ್ದಾರೆ.

ಕರ್ತವ್ಯದ ಸಮಯದಲ್ಲಿ ಚಾಲನಾ ಸಿಬ್ಬಂದಿಗಳು ಜಾಗೃತೆ ವಹಿಸಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವುದರೊಂದಿಗೆ ಸಾರ್ವಜನಿಕ ಪ್ರಯಾಣಿಕರ ನಂಬಿಕೆ ಹಾಗೂ ವಿಶ್ವಾಸಕ್ಕೆ ಪಾತ್ರರಾಗಿ ಸಂಸ್ಥೆಯ ಹಿತದೃಷ್ಟಿಯಿಂದ ಕರ್ತವ್ಯ ನಿರ್ವಹಿಸುವಂತೆ ಚಾಲನಾ ಸಿಬ್ಬಂದಿಗಳಿಗೆ ಮನವಿ ಮಾಡಿದ್ದಾರೆ. ಹಾಗೂ ಸಕಾಲದಲ್ಲಿ ತನಿಖೆ ಕೈಗೊಂಡು ಮೊಬೈಲ್ ದೂರವಾಣಿಯನ್ನು ವಾರಸುದಾರರಿಗೆ ತಲುಪಿಸಲು ಶ್ರಮವಹಿಸಿದ ತನಿಖಾ ಸಿಬ್ಬಂದಿಗಳ ಕರ್ತವ್ಯ ಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ. ಹಾಗೂ ಎಲ್ಲ ಚಾಲನಾ ಸಿಬ್ಬಂದಿಗಳು ಪ್ರಯಾಣಿಕರೊಂದಿಗೆ ಸೌಜನ್ಯಯುತವಾಗಿ ವರ್ತಿಸುವದರೊಂದಿಗೆ ಪ್ರಯಾಣದ ಸಮಯದಲ್ಲಿ ಸೂಕ್ತ ಸಹಕಾರ ನೀಡುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Read More Articles