ದೇಶದಲ್ಲಿ ಸದ್ದು ಮಾಡಿದ್ದ ಮದುವೆ ದುರಂತದಲ್ಲಿ ಅಂತ್ಯ..!

ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದ ಮದುವೆ ಈಗ ದುರಂತದಲ್ಲಿ ಅಂತ್ಯವಾಗಿದೆ. 28ರ ಯುವತಿಯನ್ನು ಮದುವೆಯಾಗಿದ್ದ 48 ವರ್ಷದ ವ್ಯಕ್ತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

promotions

ಆತ್ಮ ಹತ್ಯೆ ಮಾಡಿಕೊಂಡವನ್ನು ಶಂಕರಪ್ಪ ಎಂದು ಗುರುತಿಸಲಾಗಿದೆ, ತುಮಕೂರಿನ ಕುಣಿಗಲ್ಲ ತಾಲೂಕಿನ ಅಕ್ಕಿ ಮರಿಪಾಳ್ಯದಲ್ಲಿ ಶಂಕರಪ್ಪನ ತೋಟದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

promotions

ಮೇಘನಾ ಎಂಬ ಯವತಿಯನ್ನು ಶಂಕರಪ್ಪ ಮದುವೆಯಾಗಿದ್ದ ಸಾಮಾಜಿಕ ಜಾಲತಾಣವಾದ ಟಿಕ್‌ಟಾಕ್, ಫೆಸ್ ಬುಕ್ ಸೇರಿದಂತೆ ಅನೇಕ ಕಡೆಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ದೇಶದಲ್ಲಿಯೂ ಶಂಕರಪ್ಪನ ಮದುವೆ ಸದ್ದು ಮಾಡಿತ್ತು.

ಶಂಕರಪ್ಪ ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಕಳೆದ ಮೂರು ದಿನಗಳಿಂದ ಗಂಡ ಹೆಂಡತಿ ನಡುವೆ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ. ನಿನ್ನೆ ಮನೆ ಬಿಟ್ಟು ಹೋಗಿದ್ದ ಶಂಕರಪ್ಪ ತೋಟದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮದುವೆಯಾದ ಮೇಲೆ ಶಂಕರಪ್ಪ ಹಾಗೂ ಆಕೆಯ ಪತ್ನಿ ಮೇಘನಾ ಸಂತೋಷವಾಗಿದ್ದೇವೆ ಎಂದು ಪ್ರತಿಕ್ರಯಿಸಿದ್ದರು. ಆದರೆ ಈಗ ದುರಂತದಲ್ಲಿ ಅಂತ್ಯವಾಗಿದೆ. ಇಬ್ಬರೂ ಕೂಡ ಒಪ್ಪಿಗೆ ಮದುವೆಯಾಗಿದ್ದರೂ ಸಹ ಇಂದು ದುರಂತದಲ್ಲಿ ಮೃತಪಟ್ಟ ಶಂಕರಪ್ಪನ ಸಾವಿನ ಹಿಂದೆ ಸಾಕಷ್ಟು ಅನುಮಾನ ಮೂಡುತ್ತಿದೆ. ಸ್ಥಳಕ್ಕೆ ಹುಲಿದುರ್ಗ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

Read More Articles