ಜಿಲ್ಲೆಯಲ್ಲಿ ಹತ್ತು ದಿನದಲ್ಲಿ ನಾಲ್ಕು ಕೊಲೆ

ಚಿಕ್ಕೋಡಿ : ಬೆಳಗಾವಿ ಜಿಲ್ಲೆಯಲ್ಲಿ ಸರಣಿ ಕೊಲೆಗೆ ನಡೆಯುತ್ತಲೆ ಇವೆ. ಕೊಲೆ ಗಡುಕರಿಗೆ ಯಾವುದೇ ಭಯ ಇಲ್ಲದಂತಾಗಿದೆ. ಒಂದು ವಾರದಲ್ಲಿ ಜಿಲ್ಲೆಯಲ್ಲಿ ಇದು ನಾಲ್ಕನೇ ಕೊಲೆ ನಿಪ್ಪಾಣಿಯಲ್ಲಿ ಒರ್ವ ಯುವಕನ ಕೊಲೆ ಮಾಡಲಾಗಿದೆ.

promotions

ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ‌ ನಡೆದ ಘಟನೆ ಅಭಿಷೇಕ ದತ್ತವಾಡೆ, ೨೨ ಕೊಲೆಯಾದ ಯುವಕ ಅಭಿಷೇಕ ವಾಸಿಸುತ್ತಿದ್ದ ಮನೆಯಲ್ಲೇ ನಡೆದ ಕೃತ್ಯ ನಡೆದಿದೆ.

promotions

ಅಂತರಿಕ ವೈಷಮ್ಯದಿಂದ ಅಭಿಷೇಕ ಮೇಲೆ ಹಲ್ಲೆ ಸಂಭವ. ಮೂಲತಃ ಕೊಲ್ಲಾಪುರ ನಿವಾಸಿಯಾಗಿದ್ದ ಅಭಿಷೇಕ ನಿಪ್ಪಾಣಿಯ ನಿರಾಳೆ ಗಲ್ಲಿಯಲ್ಲಿ ತಾಯಿಯೊಡನೆ ವಾಸಿಸುತ್ತಿದ್ದ ಅಭಿಷೇಕ.

ಖಾಸಗಿ ಚಿತ್ರಮಂದಿರದಲ್ಲಿ ಕೆಲಸ‌ ಮಾಡುತಿದ್ದ ಅಭಿಷೇಕ ‌ನಿನ್ನೆ ರಾತ್ರಿ ೧ ಗಂಟೆ ಸುಮಾರಿಗೆ ಅಭಿಷೇಕನ ಕೊಚ್ಚಿ ಕೊಲೆ ಮಾಡಿದ ರಾಕ್ಷಸರು.ಪರಿಶೀಲನೆ ನಡೆಸುತ್ತಿರುವ ಪೋಲಿಸ್ ಅಧಿಕಾರಿಗಳು .ಪ್ರಾಥಮಿಕ ವಿಚಾರಣೆಯಲ್ಲಿ ಅಂತರಿಕ ವೈಷಮ್ಯದ ಹಾಗೂ ಹಣದ ವ್ಯವಹಾರದ ಸಂದೇಹ.

ಓರ್ವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿರುವ ಅಧಿಕಾರಿಗಳು.ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ.ಪರಾರಿಯಾದ ಆರೋಪಿಗಳಿಗೆ ಬಲೆ ಬೀಸಿದ ಅಧಿಕಾರಿಗಳು.‌ ನಿಪ್ಪಾಣಿ ಶಹರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More Articles