ದೇವೇಂದ್ರ ಕರಾಡೆ ನಿಧನ

ಬೆಳಗಾವಿ : ಇಲ್ಲಿನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಹಿರಿಯ ವಾಹನ ಚಾಲಕರಾದ ದೇವೇಂದ್ರ ಆರ್.ಕರಾಡೆ(63) ಅವರು ನಿಧನರಾದರು.

promotions

ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಸೇರಿದಂತೆ ಅಪಾರ ಬಳಗವನ್ನು ಅವರು ಅಗಲಿದ್ದಾರೆ.

promotions

ಬೆಳಗಾವಿ ನಗರದ ಸದಾಶಿವನಗರದ ಸ್ಮಶಾನದಲ್ಲಿ ಬುಧವಾರ (ಏ.6) ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

ಸಂತಾಪ: ಸುಮಾರು ಮೂರು ದಶಕಗಳ ಕಾಲ ವಾರ್ತಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಡಿ.ಆರ್.ಕರಾಡೆ ಅವರ ನಿಧನಕ್ಕೆ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಹಾಗೂ ಸಿಬ್ಬಂದಿ ಸಂತಾಪ ವ್ಯಕ್ತಪಡಿಸಿದ್ದಾರೆ.

Read More Articles