ಧಾರವಾಡ ಪಾಲಿಕೆ ಪ್ರತ್ಯೇಕ ಕೂಗಿದೆ ನಮ್ಮ ಬೆಂಬಲ ಇದೆ: ಟೋಪಣ್ಣವರ
- 14 Jan 2024 , 10:10 PM
- Dharwad
- 92
ಧಾರವಾಡ : ಹುಬ್ಬಳ್ಳಿ ಧಾರವಾಡದ ಅವಳಿ ನಗರದ ಅಭಿವ್ರದ್ದಿ ವಿಷಯದಲ್ಲಿ ಅಧಿಕಾರಿಗಳು ಹಾಗೂ ರಾಜಕಾರಿಣಿಗಳು ಭ್ರಷ್ಟಾಚಾರ ಎಸಗುತ್ತಿದ್ದು ಮುಂಬರುವ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಜನರು ತಕ್ಕ ಪಾಢ ಕಲಿಸಲಿದ್ದಾರೆ ಎಂದು ಆಪ್ ಉತ್ತರ ಕರ್ನಾಟಕ ಪ್ರಾಂತೀಯ ಉಸ್ತುವಾರಿ ರಾಜಕುಮಾರ ಟೋಪಣ್ಣವರ ಹೇಳಿದರು.

ಧಾರವಾಡ ಕಡಪಾ ಮ್ಯೆದಾನದಲ್ಲಿ ಆಮಆದ್ಮಿ ಪಕ್ಷ ಆಯೋಜಿಸಿದ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಕುಡಿಯುವ ನೀರಿನ ಸೌಲಭ್ಯ ನೀಡುವಲ್ಲಿ ಸರ್ಕಾರ ವಿಫಲವಾಗಿದ್ದು 24 ತಾಸು ನೀರು ಕೊಡುವುದಾಗಿ ಹೇಳಿ ನೀರು ಸರಬರಾಜು ಮಾಡುತ್ತಿಲ್ಲ.

ಬಡವರಿಗೆ ಆಶ್ರಯ ಮನೆ ನಿರ್ಮಿಸಿ ಅವುಗಳನ್ನು ಸಮಯಕ್ಕೆ ಸರಿಯಾಗಿ ಹಂಚಿಕೆ ಮಾಡದೇ ಕಳಪೆ ಕಾಮಗಾರಿ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಾಗಿಲು ಕಿಟಕಿಗಳ ನಿರ್ವಹಣೆ ಮಾಡಿಲ್ಲ. ಸ್ಮಾರ್ಟ ಸಿಟಿ ಯೋಜನೆ ಹೆಸರಿಗಷ್ಡೆ ಸೀಮಿತವಾಗಿದ್ದು ಕೇವಲ ಮುಖ್ಯ ರಸ್ತೆಗಳ ಅಭಿವ್ರದ್ದಿ ಪಡಿಸಿದೆ ಕೆಲವೆಡೆ ರಸ್ತೆ ಪಕ್ಕ ಹಾಸುಗಲ್ಲು ಹಾಕಿಲ್ಲ .
ಮಹಾನಗರ ಪಾಲಿಕೆ ಪ್ರತ್ಯೇಕ ಕೂಗು ಕೇಳಿಬರುತ್ತಿದೆ ಇದಕ್ಕೆ ನಮ್ಮ ಪಕ್ಷದಿಂದ ಬೆಂಬಲ ವ್ಯಕ್ತ ಪಡಿಸುವ ಮೂಲಕ ಸಾರ್ವಜನಿಕ ಸಮಸ್ಯೆಗೆ ಸ್ಪಂದಿಸಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಡಿ.ಎಪ್ ಪಾಟಿಲ ಹಾಗೂ ಅನೇಕ ಜನರು ಆಮ್ ಆದ್ಮಿ ಪಕ್ಷ ವನ್ನು ಟೋಪಣ್ಷವರ ಸಮ್ಮುಖದಲ್ಲಿ ಸೇರ್ಪಡೆಕೊಂಡರು.










