2024ಕ್ಕೆ ಕೇಂದ್ರದಲ್ಲಿ ಮತ್ತೇ ಬಿಜೆಪಿ ಸರ್ಕಾರ್: ಗೋವಾ ಸಿಎಂ ವಿಶ್ವಾಸ
- 15 Jan 2024 , 1:16 AM
- Belagavi
- 102
ಬೆಳಗಾವಿ : ದೇಶದಲ್ಲಿ ಮೋದಿ ಸರ್ಕಾರ ಉತ್ತಮ ಕೆಲಸ ಮಾಡಿ ಜನಪರ ಯೋಜನೆ ತಂದಿದ್ದಾರೆ. ಬರುವ 2024ರಲ್ಲಿ ಮೋದಿ ನೇತೃತ್ವದ ಸರಕಾರವೇ ರಚನೆಯಾಗಲಿದೆ ಎಂದು ಗೋವಾ ಸಿಎಂ ಪ್ರಮೋದ್ ಸಾವಂತ ಭವಿಷ್ಯ ನುಡಿದರು.

ಗುರುವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಬೆಳಗಾವಿ ಆರ್ ಎಸ್ ಎಸ್ ಕಚೇರಿಗೆ ಭೇಟಿ ನೀಡಲು ಬಂದಿದ್ದೇನೆ. ಸಂಘ ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಖಾಸಗಿ ಕಾರ್ಯಕ್ರಮ ಮುಗಿಸಿ ಕೊಲ್ಲಾಪುರಗೆ ತೆರಳಲಿದ್ದೇನೆ. ಎರಡನೇ ಬಾರಿ ಗೋವಾದ ಸಿಎಂ ಆಗಿದ್ದಕ್ಕೆ ಸಂತೋಷವಾಗಿದೆ. ಉದ್ಯೋಗ ಸೃಷ್ಟಿ ಮಾಡುವುದು ನಮ್ಮ ಮೊದಲ ಗುರಿಯಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮ ನಿರ್ಭರ್ ಯೋಜನೆ ಯಶಸ್ವಿಯಾಗಿ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಗೋವಾದಲ್ಲಿ ಪ್ರವಾಸೋದ್ಯಮ ಹೆಚ್ಚಳ ಮಾಡಬೇಕು. ಹಾಗೂ ಗಣಿಗಾರಿಕೆ ಹೆಚ್ಚಳ ಮಾಡುವ ಗುರಿಯನ್ನು ಗೋವಾ ಸರ್ಕಾರ ಹಾಕಿಕೊಂಡಿದೆ ಎಂದು ಪ್ರತಿಕ್ರಯಿಸಿದರು.
ವಿರೋಧ ಪಕ್ಷಗಳು ಆರೋಪ ಮಾಡಲು ಬಿಡುವುದಿಲ್ಲ. 2024ಕ್ಕೆ ಕೇಂದ್ರದಲ್ಲಿ ಮತ್ತೇ ಬಿಜೆಪಿ ಸರಕಾರ ಬರುವುದು ನಿಶ್ಚಿತ ಎಂದರು.










